Sunday, September 21, 2025

Muscle Growth | ಸ್ನಾಯುಗಳ ಬೆಳವಣಿಗೆಗೆ ಈ ಫ್ರೂಟ್ಸ್ ಬೆಸ್ಟ್! ತಿಂದು ನೋಡಿ..

ದೇಹದ ಸ್ನಾಯುಗಳು ಬಲಿಷ್ಠವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಜಿಮ್ ವ್ಯಾಯಾಮ, ಯೋಗ, ಫಿಟ್ನೆಸ್ ತರಬೇತಿ ಹೀಗೆ ಹಲವು ಕಸರತ್ತುಗಳ ಮೂಲಕ ದೇಹವನ್ನು ಬಲಶಾಲಿಗೊಳಿಸಲು ಹಲವರು ಪ್ರಯತ್ನಿಸುತ್ತಾರೆ. ಆದರೆ ಕೇವಲ ವ್ಯಾಯಾಮ ಮಾತ್ರವಲ್ಲದೆ, ಸರಿಯಾದ ಆಹಾರ ಸೇವನೆಯೂ ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ವಿಶೇಷವಾಗಿ ಹಣ್ಣುಗಳು ಸ್ನಾಯುಗಳ ಶಕ್ತಿ ಮತ್ತು ಪೋಷಕಾಂಶಗಳನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ತಜ್ಞರ ಪ್ರಕಾರ ಕೆಲವು ಹಣ್ಣುಗಳು ಸ್ನಾಯು ಬೆಳವಣಿಗೆಯನ್ನು ವೇಗಗೊಳಿಸುವುದಲ್ಲದೆ ದೇಹವನ್ನು ಚುರುಕಾಗಿರಲು ಸಹಾಯ ಮಾಡುತ್ತವೆ.

ಬಾಳೆಹಣ್ಣು
ಕಾರ್ಬ್ಸ್ ಹಾಗೂ ಪೋಟ್ಯಾಶಿಯಂ ಹೇರಳವಾಗಿರುವ ಬಾಳೆಹಣ್ಣು ವ್ಯಾಯಾಮದ ಬಳಿಕ ಶಕ್ತಿ ತುಂಬಲು ಮತ್ತು ಸ್ನಾಯುಗಳನ್ನು ಗಟ್ಟಿಗೊಳಿಸಲು ನೆರವಾಗುತ್ತದೆ.

ಪೇರಳೆ
ಪ್ರೋಟೀನ್, ವಿಟಮಿನ್ C ಹಾಗೂ ಫೈಬರ್‌ನಿಂದ ಸಮೃದ್ಧವಾದ ಪೇರಳೆ ಸ್ನಾಯು ಶಕ್ತಿಯನ್ನು ಹೆಚ್ಚಿಸಿ ರೋಗನಿರೋಧಕ ಶಕ್ತಿಗೂ ಸಹಾಯಕ.

ಮಾವು
ಮಾವಿನಲ್ಲಿರುವ ಕಾರ್ಬ್ಸ್ ಮತ್ತು ವಿಟಮಿನ್ಸ್ ದೇಹಕ್ಕೆ ಶಕ್ತಿ ತುಂಬಿ ವರ್ಕೌಟ್‌ಗೆ ಅಗತ್ಯ ಶಕ್ತಿಯನ್ನು ನೀಡುತ್ತದೆ.

ದಾಳಿಂಬೆ
ಆಂಟಿಆಕ್ಸಿಡೆಂಟ್ಸ್‌ಗಳಿಂದ ಸಮೃದ್ಧವಾದ ದಾಳಿಂಬೆ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಸ್ನಾಯುಗಳಿಗೆ ಆಮ್ಲಜನಕ ಪೂರೈಸುತ್ತದೆ.

ಪಪ್ಪಾಯಿ
ಪಪ್ಪಾಯಿಯಲ್ಲಿ ಇರುವ ಪಾಪೇನ್ ಪಚನಕ್ರಿಯೆಯನ್ನು ಸುಧಾರಿಸಿ ಸ್ನಾಯು ಊತ ತಡೆಯುತ್ತದೆ.

ಸಪೋಟ
ಹೆಚ್ಚಿನ ಕಾರ್ಬ್ಸ್ ಹೊಂದಿರುವ ಸಪೋಟ ದೀರ್ಘ ವ್ಯಾಯಾಮಕ್ಕೆ ಶಕ್ತಿ ತುಂಬುತ್ತದೆ.

ಕಲ್ಲಂಗಡಿ
ಹೈಡ್ರೇಶನ್ ಕಾಪಾಡುವ ಕಲ್ಲಂಗಡಿ ಆಯಾಸವನ್ನು ಕಡಿಮೆ ಮಾಡುತ್ತದೆ.

ಬೆಟ್ಟದ ನೆಲ್ಲಿಕಾಯಿ
ವಿಟಮಿನ್ C ಸಮೃದ್ಧವಾಗಿರುವ ಇದು ಸ್ನಾಯು ರಕ್ಷಣೆಗೆ ಅಗತ್ಯ.

ಸೀತಾಫಲ
ಪ್ರೋಟೀನ್ ಹಾಗೂ ಕಾರ್ಬ್ಸ್ ಹೊಂದಿರುವ ಸೀತಾಫಲ ವ್ಯಾಯಾಮದ ಬಳಿಕ ಶಕ್ತಿಯನ್ನು ಮರಳಿ ನೀಡುತ್ತದೆ.

ಹಲಸಿನ ಹಣ್ಣು
ಪ್ರೋಟೀನ್ ಮತ್ತು ಪೋಟ್ಯಾಶಿಯಂ ಅಧಿಕವಾಗಿರುವ ಹಲಸು ಸ್ನಾಯು ಶಕ್ತಿಯನ್ನು ಹೆಚ್ಚಿಸಲು ಉತ್ತಮ.

ಇದನ್ನೂ ಓದಿ