ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎ.ಆರ್.ರೆಹಮಾನ್ ಅವರ ಆರೋಗ್ಯ ಸ್ಥಿತಿ ಹೇಗಿದೆ? ಎಂಬುದನ್ನು ಖುದ್ದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಚಿಂತೆಪಡುವ ಅವಶ್ಯಕತೆಯಿಲ್ಲ, ಆರಾಮಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರೆಹಮಾನ್ ಪುತ್ರ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ನಿರ್ಜಲೀಕರಣದಿಂದ ನನ್ನ ತಂದೆ ಸ್ವಲ್ಪ ನಿಶ್ಯಕ್ತಿ ಹೊಂದಿದ್ದರು. ಆದ್ದರಿಂದ ನಾವು ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಿಸಿದೆವು. ಆದರೆ ಈಗ ಚೆನ್ನಾಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.