ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಪ್ರಮುಖ ಹೆಜ್ಜೆಯಲ್ಲಿ, ಅಸ್ಸಾಂ ಕ್ಯಾಬಿನೆಟ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ, ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ, 1935 ಅನ್ನು ಅಸ್ಸಾಂ ರದ್ದುಗೊಳಿಸಿದೆ.
ಜೊತೆಗೆ, ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳು ಈಗ ವಿಶೇಷ ವಿವಾಹ ಕಾನೂನಿಗೆ ಒಳಪಟ್ಟಿವೆ ಎನ್ನಲಾಗಿದೆ.
ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಸಚಿವ ಜಯಂತ ಮಲ್ಲಾ ಬರುವಾ, ಅಸ್ಸಾಂ ಕ್ಯಾಬಿನೆಟ್ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಅಸ್ಸಾಂ ವಿಧಾನಸಭೆ ಅಧಿವೇಶನ ಫೆ.28ರವರೆಗೆ ನಡೆಯಲಿದ್ದು, ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.