ಮುಸ್ಲಿಂ ಮಹಿಳೆಗೆ ಖುಲಾ ಪಡೆಯಲು ಗಂಡನ ಒಪ್ಪಿಗೆ ಅಗತ್ಯವಿಲ್ಲ: ತೆಲಂಗಾಣ ಹೈಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಮುಸ್ಲಿಂ ಮಹಿಳೆಯರಿಗೆ ಖುಲಾ (ಡಿವೋರ್ಸ್) ಪಡೆಯಲು ಗಂಡನ ಒಪ್ಪಿಗೆ ಅಗತ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ.

ಕಿರುಕುಳದ ಆರೋಪದ ಮೇರೆಗೆ ವಿಚ್ಛೇದನ ಕೋರಿದ ಮಹಿಳೆಯ ಪ್ರಕರಣದಲ್ಲಿ ಮುಫ್ತಿ ನೀಡಿದ ಖುಲಾವನ್ನು ಕೌಟುಂಬಿಕ ನ್ಯಾಯಾಲಯ ಮತ್ತು ಹೈಕೋರ್ಟ್ ಎತ್ತಿಹಿಡಿದಿದೆ.

ಮುಸ್ಲಿಂ ಸಮಾಜದಲ್ಲಿ ಹೆಂಡತಿಯೇ ವಿಚ್ಛೇದನ ಕೇಳೋದಕ್ಕೆ ಖುಲಾ ಅಂತಾರೆ. ಗಂಡನ ಒಪ್ಪಿಗೆ ಇಲ್ಲದೆಯೂ ಮುಸ್ಲಿಂ ಮಹಿಳೆ ಖುಲಾ ಕೇಳಬಹುದು ಅಂತ ಹೈಕೋರ್ಟ್ ಹೇಳಿದೆ.

ಮುಫ್ತಿ ಕೊಟ್ಟ ಖುಲಾವನ್ನು ಆಕೆಯ ಗಂಡ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದನು. ಗಂಡನ ಅಕ್ಷೇಪಗಳ ಹೊರತಾಗಿಯೂ, ಖುಲಾಗೆ ಕೌಟುಂಬಿಕ ನ್ಯಾಯಾಲಯ ಎತ್ತಿ ಹಿಡಿದಿತ್ತು. ಈ ಕುರಿತು ಮಹಿಳೆಯ ಗಂಡ ಹೈಕೋರ್ಟ್‌ಗೆ ಮೇಲ್ಮನಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಮಧುಸೂದನ್ ರಾವ್ ಅವರನ್ನೊಳಗೊಂಡ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಹೆಂಡತಿ ಖುಲಾಗೆ ಗಂಡ ಒಪ್ಪಿಕೊಳ್ಳಬೇಕು ಎಂಬ ಆದೇಶವನ್ನು ಎತ್ತಿ ಹಿಡಿದಿದೆ.

‘ಮುಸ್ಲಿಂ ಮಹಿಳೆಗೆ ಖುಲಾ ಪಡೆಯುವ ಹಕ್ಕಿದೆ ಮತ್ತು ಇದಕ್ಕೆ ಗಂಡನ ಅನುಮತಿ ಅಗತ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಮುಸ್ಲಿಂ ದಂಪತಿ 2012 ರಲ್ಲಿ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ಒಟ್ಟಿಗೆ ವಾಸಿಸುತ್ತಿದ್ದರು. ನಂತರ, ಪತ್ನಿ ಗಂಡನ ಮೇಲೆ ಕಿರುಕುಳದ ಆರೋಪ ಹೊರಿಸಿ ಖುಲಾ ನಾಮಾ ಆರಂಭಿಸಿದಳು. ಗಂಡ 3 ಬಾರಿ ಸಂಧಾನಕ್ಕೆ ಹಾಜರಾಗಲಿಲ್ಲ. ಮುಫ್ತಿಯಿಂದ ಮಹಿಳೆಗೆ ಖುಲಾ ಸಿಕ್ಕಾಗ, ಗಂಡ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದನು. ಮುಸ್ಲಿಂ ಪರ್ಸನಲ್ ಲಾ ಪ್ರಕಾರ ನ್ಯಾಯಾಲಯದ ಹಸ್ತಕ್ಷೇಪವಿಲ್ಲದೆಯೇ ವಿಚ್ಛೇದನ ಪಡೆಯಬಹುದು ಎಂದು ಮಹಿಳಾ ವಕೀಲರು ವಾದಿಸಿದರು. ವಿಚ್ಛೇದನ ಆದೇಶ ನೀಡುವ ಅಧಿಕಾರ ಕಾಜಿ ಅಥವಾ ನ್ಯಾಯಾಲಯಕ್ಕೆ ಮಾತ್ರ ಇದೆ ಎಂದು ಗಂಡನ ವಕೀಲರು ವಾದಿಸಿದರು.

ಖುಲಾ ಎಂದರೆ ಏನು?
ಖುಲಾ ಎಂದರೆ ಅರೇಬಿಕ್ ಭಾಷೆಯಲ್ಲಿ ಬಿಟ್ಟುಬಿಡುವುದು ಅಂತ ಅರ್ಥ. ಇದು ಮದುವೆ ಮುರಿಯುವ ಒಂದು ವಿಧಾನ. ಮುಸ್ಲಿಂ ಮಹಿಳೆ ಮದುವೆ ಮುಂದುವರಿಸಲು ಇಷ್ಟಪಡದಿದ್ದಾಗ ಖುಲಾ ಪಡೆಯುತ್ತಾಳೆ. ಮುಫ್ತಿಯನ್ನ ಸಂಪರ್ಕಿಸಿ, ಖಾಸಗಿಯಾಗಿ ವಿಚಾರವನ್ನ ಬಗೆಹರಿಸಿಕೊಳ್ಳಬಹುದು. ಖುಲಾ ಪ್ರಕ್ರಿಯೆಯ ಮೂಲಕ ಮಹಿಳೆ ತನ್ನ ಗಂಡನಿಗೆ ಮೆಹರ್ ಹಿಂದಿರುಗಿಸುವ ಮೂಲಕ ಅಥವಾ ತನ್ನ ಕೆಲವು ಹಕ್ಕುಗಳನ್ನು ತ್ಯಜಿಸುವ ಮೂಲಕ ವಿಚ್ಛೇದನ ಪಡೆಯುತ್ತಾಳೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!