MUST READ | ಸೆರೆಸಿಕ್ಕಿದೆ ಹಿಂದೆಂದೂ ನೋಡಿರದ ಬ್ರಹ್ಮಾಂಡದ ಅದ್ಭುತ ದೃಶ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಸಾ ಮಂಗಳವಾರ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಮೂಲಕ ತೆಗೆಯಲಾದ ಬ್ರಹ್ಮಾಂಡದ ಹೊಸ ತರಂಗ ಕುರಿತಂತೆ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ.ಈ ಚಿತ್ರದಲ್ಲಿ ಕಂಡುಬಂದಿರುವ ದೃಶ್ಯಾವಳಿ 13 ಕೋಟಿ ವರ್ಷಗಳ ಹಿಂದೆ ಉತ್ಪತ್ತಿಯಾಗಿ ಸಾಗಿ ಬಂದ ತೇಜೋಪುಂಜದ ಚಿತ್ರವಾಗಿದ್ದು, ಈ ವರೆಗಿನ ಅತ್ಯಂತ ಸ್ಪಷ್ಟ ಚಿತ್ರ ಎಂದು ವಿಶ್ಲೇಷಿಸಲಾಗಿದೆ.
ಬಾಹ್ಯಾಕಾಶದಲ್ಲಿ ಇರಿಸಲಾದ ಈ ವರೆಗಿನ ಅತ್ಯಂತ ಶಕ್ತಿಶಾಲಿ ವೀಕ್ಷಣಾಲಯ ಎಂದು ಬಣ್ಣಿಸಲಾಗಿರುವ ಈ ಟೆಲಿಸ್ಕೋಪ್ ತೆಗೆದ ಚಿತ್ರದಲ್ಲಿ ವಿಭಿನ್ನ ಬಣ್ಣಗಳ ನಕ್ಷತ್ರ ಪುಂಜಗಳು ಗೋಚರಿಸುತ್ತಿವೆ.ಅಮೆರಿಕದ ಅಧ್ಯಕ್ಷ ಜೊಯಿ ಬೈಡೆನ್ ಬಿಡುಗಡೆಗೊಳಿಸಿ ಇದೊಂದು ಮನುಕುಲದ ಇತಿಹಾಸದಲ್ಲೇ ಅಪೂರ್ವ ದಿನವೆಂದು ಬಣ್ಣಿಸಿದ್ದಾರೆ .
ಇದು ತೆಗೆದಿರುವ ಚಿತ್ರಬೆಳಕು13 ದಶಕೋಟಿ ವರ್ಷಗಳ ಹಿಂದೆ ಉತ್ಪತ್ತಿಯಾಗಿ ಸಾಗಿ ಬಂದಿರುವ ಬೆಳಕು.ಇದು ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್ ಬ್ಯಾಂಗ್ ಸಂಭವಿಸಿದ 800 ದಶಲಕ್ಷ ವರ್ಷಗಳ ನಂತರದ ಚಿತ್ರಣ ಇದು ಎಂದು ತಜ್ಞರು ಅಂದಾಜಿಸಿದ್ದಾರೆ. ಇಲ್ಲಿ ಲಭಿಸಿರುವ ಪ್ರತಿಯೊಂದು ಚಿತ್ರವೂ ಹೊಸ ಆವಿಷ್ಕಾರ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಬಣ್ಣಿಸಿದ್ದಾರೆ. ನಾವು ಹಿಂದೆಂದೂ ನೋಡಿರದ ಬ್ರಹ್ಮಾಂಡದ ಬಗೆಗೆ ಇದು ಒಂದು ಹೊಸ ನೋಟವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ಡಿ.28 ರಂದು 76 ಸಾವಿರ ಕೋ.ರೂ.ಗಳ ವೆಚ್ಚದ ಈ ಟೆಲಿಸ್ಕೋಪನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.
ಬಿಗ್‌ಬ್ಯಾಂಗ್ ಕುರಿತಂತೆ ಅಧ್ಯಯನ , ಏಲಿಯನ್‌ಗಳ ಅಧ್ಯಯನ ಸೇರಿದಂತೆ ಹಲವು ಉದ್ದೇಶಗಳನ್ನು ಇದು ಹೊಂದಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!