Tuesday, November 25, 2025

ಮುತ್ತುಸ್ವಾಮಿ ಶತಕದ ಆಟ: ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 489 ರನ್ ಗಳಿಗೆ ಆಲೌಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಸೆನುರನ್ ಮುತ್ತುಸ್ವಾಮಿ ಶತಕದ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್‌ ಪಂದ್ಯದ 2ನೇ ದಿನ ಭರ್ಜರಿ ಕಂಬ್ಯಾಕ್‌ ಮಾಡಿದೆ. ತಮ್ಮ ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ ಬರೋಬ್ಬರಿ 151.1 ಓವರ್‌ಗಳಲ್ಲಿ 489 ರನ್‌ಗಳ ಬೃಹತ್‌ ಮೊತ್ತ ಪೇರಿಸಿದೆ.

ಭಾರತ 2ನೇ ದಿನದ ಅಂತ್ಯಕ್ಕೆ 6.1 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೇ 9 ರನ್‌ ಗಳಿಸಿದೆ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದೆ. ಯಶಸ್ವಿ ಜೈಸ್ವಾಲ್‌ 23 ಎಸೆತಗಳಲ್ಲಿ 7 ರನ್‌, ಕೆ.ಎಲ್‌ ರಾಹುಲ್‌ 14 ಎಸೆತಗಳಲ್ಲಿ 2 ರನ್‌ ಗಳಿಸಿದ್ದು, ಸೋಮವಾರ ಬ್ಯಾಟಿಂಗ್‌ ಆರಂಭಿಸಲಿದ್ದಾರೆ.

ಮೊದಲ ದಿನವೇ 247 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪರ ಮಧ್ಯಮ ಕ್ರಮಾಂಕದಲ್ಲಿ ಸೆನುರನ್‌ ಮುತ್ತುಸ್ವಾಮಿ, ಆಲ್‌ರೌಂಡರ್‌ ಮಾರ್ಕೊ ಜಾನ್ಸೆನ್‌ ಅವರ ಅಮೋಘ ಬ್ಯಾಟಿಂಗ್‌ ಮೂಲಕ ಉತ್ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಇದರಿಂದ ಆಫ್ರಿಕಾ 450 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಮುತ್ತುಸ್ವಾಮಿ 206 ಎಸೆತಗಳಲ್ಲಿ 109 ರನ್‌ (10 ಬೌಂಡರಿ, 2 ಸಿಕ್ಸರ್)‌ ಗಳಿಸಿದ್ರೆ, ಮಾರ್ಕೊ ಜಾನ್ಸೆನ್‌ 91 ಎಸೆತಗಳಲ್ಲಿ 93 ರನ್‌ (7 ಸಿಕ್ಸರ್‌, 6 ಬೌಂಡರಿ) ಬಳಿಸಿ ಔಟಾದರು. ಇನ್ನುಳಿದಂತೆ‌ ಟ್ರಿಸ್ಟನ್‌ ಸ್ಟಬ್ಸ್‌ 49 ರನ್‌, ಬವುಮಾ 41 ರನ್‌, ಕೈಲ್ ವೆರ್ರೆನ್ 45 ರನ್‌, ಏಡನ್‌ ಮಾರ್ಕ್ರಂ 38 ರನ್‌, ರಿಯಾನ್‌ ಸಿಕಲ್ಟನ್‌ 35 ರನ್‌, ಟೋನಿ ಡಿ ಜೋರ್ಜಿ 228 ರನ್‌, ಮುಲ್ದರ್‌ 13 ರನ್‌, ಶಿಮೊನ್‌ ಹಾರ್ಮರ್‌ 5 ರನ್‌, ಕೇಶವ್‌ ಅಜೇಯ 12 ರನ್‌ ಗಳಿಸಿ ಅಜೇಯರಾಗುಳಿದರು.

error: Content is protected !!