ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ಅಂತಾರಾಷ್ಟ್ರೀಯ ಫುಟ್ಬಾಲ್ ನಾಯಕ ಸುನಿಲ್ ಛೆಟ್ರಿ ನಿವೃತ್ತಿ ಘೋಷಿಸಿದ್ದಾರೆ. 39 ವರ್ಷದ ಛೆಟ್ರಿ, ಜೂನ್ 6 ರಂದು ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಸುನಿಲ್ ಛೆಟ್ರಿ ಹಲವು ವಿಷಯಗಳನ್ನು ತಿಳಿಸಿದ್ದಾರೆ. ನಿರ್ದಿಷ್ಟವಾಗಿ, ಅವರು ತಮ್ಮ ಅನಿಸಿಕೆಗಳನ್ನು ಮತ್ತು ಚೊಚ್ಚಲ ಪಂದ್ಯದ ಸಂತೋಷವನ್ನು ಹಂಚಿಕೊಂಡರು. ಈ ಭಾವನಾತ್ಮಕ ವಿಡಿಯೋಗೆ ಟೀಂ ಇಂಡಿಯಾ ಲೆಜೆಂಡ್ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿದ್ದಾರೆ.
ಸುನಿಲ್ ಛೆಟ್ರಿ ಅವರ ವಿದಾಯ ಘೋಷಣೆಯ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, “ಮೈ ಬದ್ರರ್, ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಎಂದು ಕಿಂಗ್ ಕೊಹ್ಲಿ ಕಾಮೆಂಟ್ ಮಾಡಿದ್ದು ಇದೀಗ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಹಾಗೂ ಸುನಿಲ್ ಛೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಕಳೆದ ಸೀಸನ್ ಐಪಿಎಲ್ ವೇಳೆ ಸುನಿಲ್ ಛೆಟ್ರಿ ಆರ್ಸಿಬಿ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಛೆಟ್ರಿ, ನಾನು ಕೂಡ ಬೆಂಗಳೂರು ಬಿಎಫ್ಸಿ ಆಟಗಾರ. ನಾನು ಬಿಎಫ್ಸಿ ಪರ ಆಡಲು ಆರಂಭಿಸಿದಾಗಿನಿಂದ ಆರ್ಸಿಬಿಯನ್ನು ಬೆಂಬಲಿಸುತ್ತಿದ್ದೇನೆ. ಬೆಂಗಳೂರು ನಮ್ಮ ನಗರ. ಅಂದ್ರೆ ನಾನು ಕೂಡ RCB ಫ್ಯಾನ್ ಅಂತ ಹೇಳಿ ಬೆಂಗಳೂರು ನಮ್ಮ ತಂಡವೇ ಎಂದು ಹೇಳಿದ್ದಾರೆ.