ಎಷ್ಟೊಂದು ಕ್ಲಿನಿಕ್‌ಗಳು ನನ್ನನ್ನು ರಿಜೆಕ್ಟ್‌ ಮಾಡಿತ್ತು, ನನ್ನ ಮಕ್ಕಳಿಗೆ ತಂದೆ ಇಲ್ಲ ಬಟ್‌.. ನಟಿ ಭಾವನಾ ಹೇಳಿದ್ದೇನು??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕನ್ನಡದ ಖ್ಯಾತ ನಟಿ ಭಾವನಾ ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್‌ ಮೂಲಕ ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಮದುವೆಯೇ ಆಗದ ಭಾವನ ಈ ವಯಸ್ಸಿನಲ್ಲಿ ಗಟ್ಟಿ ನಿರ್ಧಾರವೊಂದನ್ನು ಮಾಡಿದ್ದಾರೆ. ಇದು ಎಷ್ಟೊಂದು ಜನಕ್ಕೆ ಆಶ್ಚಯರ್ವನ್ನುಂಟು ಮಾಡಿದೆ. ಈ ಬಗ್ಗೆ ಭಾವನಾ ಮನಸ್ಸುಬಿಚ್ಚಿ ಮಾತನಾಡಿದ್ದಾರೆ.

ಒಂದು ಹೊಸ ಅಧ್ಯಾಯ, ಒಂದು ಹೊಸ ಲಯ ಎನ್ನುವ ಮೂಲಕ ಅವರು ಬರಹ ಆರಂಭಿಸಿದ್ದಾರೆ. ಇದನ್ನು ನಾನು ಹೇಳುತ್ತೇನೆ ಅಂತ ಊಹಿಸಿಯೇ ಇರಲಿಲ್ಲ. ಆದರೆ ನಾನು ಈಗ 6 ತಿಂಗಳ ಗರ್ಣಿಣಿ. ಅವಳಿ ಮಕ್ಕಳ ತಾಯಿ ಆಗುತ್ತಿದ್ದೇನೆ. ಧನ್ಯತಾ ಭಾವ ಆವರಿಸಿದೆ ಎಂದು ಭಾವನಾ ರಾಮಣ್ಣ ಅವರು ಹೇಳಿದ್ದಾರೆ. ಜೊತೆಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

20ರ ವಯಸ್ಸಿನಲ್ಲಿ ಮತ್ತು 30ರ ವಯಸ್ಸಿನಲ್ಲಿ ನಾನು ತಾಯಿ ಆಗುವ ಬಗ್ಗೆ ಆಲೋಚಿಸಿರಲಿಲ್ಲ. ಆದರೆ 40ನೇ ವಯಸ್ಸು ಆದಾಗ ತಾಯಿಯಾಗುವ ಬಯಕೆ ತೀವ್ರವಾಗಿತ್ತು. ಒಂಟಿ ಮಹಿಳೆಯಾಗಿ ಈ ದಾರಿ ಸುಲಭದ್ದಾಗಿರಲಿಲ್ಲ. ಸಾಕಷ್ಟು ಐವಿಎಫ್ ಕ್ಲಿನಿಕ್​​ಗಳು ನನ್ನನ್ನು ಕೂಡಲೇ ತಿರಸ್ಕರಿಸಿದವು. ಆದರೆ ಡಾಕ್ಟರ್ ಸುಷ್ಮಾ ಅವರನ್ನು ರೇನ್​ ಬೋ ಆಸ್ಪತ್ರೆಯಲ್ಲಿ ಭೇಟಿಯಾದಾಗ ಅವರು ನನ್ನನ್ನು ಯಾವುದೇ ಜಡ್ಜ್​ಮೆಂಟ್ ಇಲ್ಲದೇ ಸ್ವಾಗತಿಸಿದರು. ಅವರ ಬೆಂಬಲದಿಂದ ನಾನು ಮೊದಲ ಪ್ರಯತ್ನದಲ್ಲೇ ಗರ್ಭಿಣಿ ಆದೆ ಎಂದಿದ್ದಾರೆ ಭಾವನಾ ರಾವಣ್ಣ.

ಭಾವನಾ ರಾಮಣ್ಣ ಅವರ ಇಡೀ ಕುಟುಂಬದವರು ನಟಿಯ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ‘ನನ್ನ ತಂದೆ, ಒಡಹುಟ್ಟಿದವರು, ಪ್ರೀತಿಪಾತ್ರರು ಬಹಳ ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪರವಾಗಿ ನಿಂತುಕೊಂಡರು. ಕೆಲವರು ನನ್ನ ನಿರ್ಧಾರವನ್ನು ಪ್ರಶ್ನಿಸಿದರು. ಆದರೆ ನಾನು ಇದಕ್ಕೆ ಸಿದ್ಧವಾಗಿದ್ದೇನೆ ಎಂಬುದು ನನ್ನ ಮನಸ್ಸಿಗೆ ತಿಳಿದಿತ್ತು’ ಎಂದು ಭಾವನಾ ರಾಮಣ್ಣ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!