ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ನಟ ಬಾಲಯ್ಯ ಉರ್ಫ್ ನಂದಮೂರಿ ಬಾಲಕೃಷ್ಣ ಹೋದ ಜಾಗ ಸದಾ ಸದ್ದು ಗದ್ದಲ ಇರುತ್ತದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟಿ ಅಂಜಲಿರನ್ನು ತಳ್ಳಿದಕ್ಕೆ ಭಾರೀ ಚರ್ಚೆಯಾಗಿತ್ತು. ವಿವಾದಕ್ಕೆ ನಟಿ ಸ್ಪಷ್ಟನೆ ನೀಡಿ ಬಾಯಿ ಮುಚ್ಚಿಸಿದ್ದರು. ಆದರೆ ಈಗ ಬಾಲಯ್ಯ ಮದ್ಯ ವ್ಯಸನದ ಬಗ್ಗೆ ಅಳಿಯ ಶ್ರೀಭರತ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ನಮ್ಮ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್ ಅನ್ನು ಕುಡಿಯುತ್ತಾರೆ. ಇದು ತಿಳಿದ ಮೇಲೆ ಆ ಕಂಪನಿಯ ಸ್ಟಾಕ್ಸ್ ಮೌಲ್ಯ ಹೆಚ್ಚಾಯಿತು ಎಂದು ನಕ್ಕಿದ್ದಾರೆ. ಅಲ್ಲದೆ ಅದಕ್ಕೆ ಬಿಸಿ ನೀರು ಸೇವಿಸುತ್ತಾರಂತೆ ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ ಹೌದು ನಿಜ ಎಂದು ಭರತ್ ರಿಯಾಕ್ಟ್ ಮಾಡಿದ್ದಾರೆ.
ಮಾವನ ಬಳಿ ಒಂದು ಬ್ಯಾಗ್ ಇರುತ್ತದೆ ಅದರಲ್ಲಿ ಸದಾ ಬಿಸಿ ನೀರು ಮತ್ತು ಮದ್ಯದ ಬಾಟಲ್ ಇರುತ್ತದೆ. ಅವರು ಎಲ್ಲಿಗೆ ಹೋದರೂ ಆ ಬ್ಯಾಗ್ ಇರಬೇಕು. ಅಮೆರಿಕಾಗೆ ಹೋದರೂ ತೆಗೆದುಕೊಂಡು ಹೋಗುತ್ತಾರೆ. ತುಂಬಾ ಲಾಯಲ್ಟಿ ನಮ್ಮ ಮಾವ ಎಂದು ಹೇಳಿದ್ದು ಇದೀಗ ವೈರಲ್ ಆಗಿದೆ. ಮತ್ತೆ ಅಂಜಲಿ ವಿಚಾರಕ್ಕೆ ಕನೆಕ್ಟ್ ಮಾಡಿ ಬಾಲಯ್ಯರನ್ನು ಟ್ರೋಲ್ ಮಾಡುತ್ತಿದ್ದಾರೆ.