March 31, 2026
Tuesday, March 31, 2026
spot_img

ನನ್ನ ಹುಟ್ಟೂರು ಕೆರಾಡಿ ಈಗ ಫಿಲ್ಮ್ ಸಿಟಿಯಾಗಿದೆ: ಕ್ರಿಟಿಕ್ಸ್ ಅವಾರ್ಡ್ಸ್ ನಲ್ಲಿ ಮನಬಿಚ್ಚಿ ಮಾತಾಡಿದ ಶೆಟ್ರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ-ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಸಿನಿರಂಗದ ಪ್ರಮುಖರನ್ನು ಅನ್‌ಫಾಲೋ ಮಾಡಿದ ವಿಚಾರ ಚರ್ಚೆಯಾಗುತ್ತಿದ್ದ ನಡುವೆಯೇ, ಈಗ ‘ಕಾಂತಾರ’ ಚಿತ್ರದ ಸಾಧನೆ ಮತ್ತು ಕರಾವಳಿ ಭಾಗದ ಬೆಳವಣಿಗೆ ಬಗ್ಗೆ ಅವರು ಮಾತನಾಡಿದ್ದಾರೆ.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿಯೇ ಮನಬಿಚ್ಚಿದ ಶೆಟ್ರು ‘ಕಾಂತಾರ’ ಹಾಗೂ ಅದರ ಮುಂದಿನ ಅಧ್ಯಾಯದ ಚಿತ್ರಿಕರಣಕ್ಕಾಗಿ ಕುಂದಾಪುರದ ಕೆರಾಡಿಯಲ್ಲಿ ನಿರ್ಮಿಸಲಾದ ಭವ್ಯ ಸೆಟ್ ಇದೀಗ ಆ ಭಾಗದ ಗುರುತಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಇಂತಹ ದೊಡ್ಡ ಸೆಟ್‌ಗಳನ್ನು ಫಿಲ್ಮ್ ಸಿಟಿಗಳಲ್ಲಿ ನಿರ್ಮಿಸಲಾಗುತ್ತದೆ. ಆದರೆ, ಸ್ಥಳೀಯ ವಾತಾವರಣ ಮತ್ತು ಸಂಸ್ಕೃತಿಯನ್ನು ನೈಜವಾಗಿ ತೋರಿಸಲು ರಿಷಬ್ ಶೆಟ್ಟಿ ತಂಡ ಕೆರಾಡಿಯನ್ನೇ ಆಯ್ಕೆ ಮಾಡಿಕೊಂಡಿತ್ತು.

ಇದನ್ನೂ ಓದಿ:

‘ಕಾಂತಾರ ಬಳಿಕ ಕುಂದಾಪುರ ಮತ್ತು ಬೈಂದೂರು ಭಾಗವು ಫಿಲ್ಮ್ ಸಿಟಿಯಂತೆ ಬದಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಇನ್ನಷ್ಟು ಸಿನಿಮಾಗಳು ಶೂಟಿಂಗ್ ಆಗುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

ಕರಾವಳಿ ಕರ್ನಾಟಕದ ಪ್ರಕೃತಿ ಸೌಂದರ್ಯ, ಸಂಸ್ಕೃತಿ ಮತ್ತು ಸ್ಥಳೀಯ ಪರಂಪರೆ ಈಗ ರಾಜ್ಯದ ಹೊರಗೂ ಹೆಚ್ಚು ಪರಿಚಿತವಾಗಿದೆ. ‘ಕಾಂತಾರ’ ಚಿತ್ರದ ಯಶಸ್ಸಿನಿಂದ ಈ ಭಾಗದ ಮೇಲೆ ಸಿನಿರಂಗದ ಗಮನ ಹೆಚ್ಚಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !