ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಕಿರುತೆರೆ ನಟ ಶ್ರೀಧರ್ ನಾಯಕ್ ನಿಧನರಾಗಿದ್ದಾರೆ. ಇಡೀ ಕನ್ನಡ ಕಿರುತೆರೆ ಶ್ರೀಧರ್ ನಿಧನಕ್ಕೆ ಸಂತಾಪ ಸೂಚಿಸಿದೆ. ಇತ್ತ ಶ್ರೀಧರ್ ಪತ್ನಿ ಜ್ಯೋತಿ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಇದರಲ್ಲಿ ಶ್ರೀಧರ್‌ಗೆ ಏಡ್ಸ್ ಇದೆ, ನಂತರ ಕ್ಯಾನ್ಸರ್ ಕೂಡ ಬಂತು ಎಂದು ಜ್ಯೋತಿ ಹೇಳಿಕೊಂಡಿದ್ದಾರೆ. ಜ್ಯೋತಿ ಇನ್ನೊಬ್ಬರ ಜೊತೆ ಓಡಿಹೋಗಿದ್ದಾರೆ ಎಂದು ಶ್ರೀಧರ್ ಹತ್ತು ತಿಂಗಳ ಹಿಂದೆ ಆರೋಪ ಮಾಡಿದ್ದರು. ಅದಕ್ಕೆ ಪ್ರತ್ಯಾರೋಪ ಮಾಡಿ ಜ್ಯೋತಿ ಇನ್ನೊಂದು ಆಡಿಯೋ ಬಿಟ್ಟಿದ್ದರು.
ಇದರಲ್ಲಿ ಶ್ರೀಧರ್ ನನಗೆ ಹೊಡೆದಿದ್ದಾರೆ, ನಾನು ಸಹಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು.
ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು.
‘ನಾನು ಯಾರ ಜೊತೆಯೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಟ್ರ್ಯಾಜಿಡಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಆದರೆ, ನಡೆದಿದೆ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ. ಅವನಿಗೆ ಎಚ್ಐವಿ ಬಂದಿದೆ. ಅಲ್ಲದೆ, ಕ್ಯಾನ್ಸರ್ ಕೂಡ ಬಂದಿದೆ’ ಎಂಬ ಮಾತನ್ನು ಅವರು ಹೇಳಿದ್ದರು.