ನನ್ನ ಗಂಡ ಐಸಿಸ್ ಅಲ್ಲ, ಮಕ್ಕಳೇನೂ ಜಿಹಾದಿಗಳಾಗಲ್ಲ: ನಟಿ ಪ್ರಿಯಾಮಣಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

2017ರಲ್ಲಿ ನಟಿ ಪ್ರಿಯಾಮಣಿ ಉದ್ಯಮಿ ಮುಸ್ತಫಾ ರಾಜ್ (Mustafa Raj) ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿ ಸುಖ ಸಂಸಾರ ನಡೆಸುತ್ತಿದ್ದರೂ ಇವರಿಬ್ಬರ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.

ಉದ್ಯಮಿ ಮುಸ್ತಫಾ ರಾಜ್ ಮೊದಲ ಪತ್ನಿ ಆಯೆಷಾಗೆ ವಿಚ್ಛೇದನ ನೀಡದೆ ಪ್ರಿಯಾಮಣಿ ಮದುವೆಯಾಗಿದ್ದಾರೆ. ಹೀಗಾಗಿ ಅವರಿಬ್ಬರ ಮದುವೆ ಅಸಿಂಧು ಎಂದು ಆರೋಪಿಸಿ ಆಯೆಷಾ, ಮುಸ್ತಫಾ ಹಾಗೂ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದರು.

ಇದಾದ ಬಳಿಕ ಪ್ರಿಯಾಮಣಿ ಹೋದಲ್ಲಿದಂಪತಿ ಡಿವೋರ್ಸ್​ ಆಗುತ್ತಿದ್ದಾರೆ ಎನ್ನುವ ಸುದ್ದಿಯೂಆಗಿತ್ತು. ಇದಕ್ಕೆ ಉತ್ತರಿಸಿದ್ದ ನಟಿ, ನನ್ನ ಹಾಗೂ ಮುಸ್ತಫಾ ರಾಜ್ ಸಂಬಂಧ ಭದ್ರತೆಯಿಂದ ಕೂಡಿದೆ. ಅವರು ಅಮೆರಿಕದಲ್ಲಿರುತ್ತಾರೆ. ನಾವಿಬ್ಬರೂ ದಿನಾಲೂ ಮಾತನಾಡಿಕೊಳ್ಳುತ್ತೇವೆ. ಕೆಲಸ ತುಂಬ ಇದ್ದಾಗ ಒಮ್ಮೊಮ್ಮೆ ಹಾಯ್, ಹೆಲೋ ಅಂತಲಾದರೂ ಮೆಸೇಜ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಇದೀಗ ಮತ್ತೆ ಏನೋ ಸರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಿದ್ದು, ಇದರಿಂದ ಗರಂ ಆಗಿರುವ ನಟಿ ಪ್ರಿಯಾಮಣಿ (Priyamani), ನಾನು ಪ್ರೀತಿಸಿ ಮದುವೆ ಆಗಿದ್ದು ತಪ್ಪಾ? ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ ಎಂದಿದ್ದಾರೆ. ನನ್ನನ್ನು ನೋಡಿ ದೇವತೆ ಹಾಗೆ, ಹೀಗೆ ಎನ್ನುತ್ತಾರೆ, ಆದರೆ ನಾನು ಪ್ರೀತಿಸಿದವರನ್ನು ಮದುವೆಯಾದರೆ ಟ್ರೋಲ್​ (Troll) ಮಾಡುತ್ತಾರೆ. ಇದು ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

ನನ್ನ ಪತಿ ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ (Religion) ಏನು? ಇದರಲ್ಲಿ ತಪ್ಪೇನಿದೆ? ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ (Love Jihad) ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದಿರುವ ಪ್ರಿಯಾಮಣಿ, ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನೋದಿಲ್ವಾ, ಅದ್ಯಾಕೆ ಅರ್ಥವಾಗುವುದಿಲ್ಲ ಎಂದಿದ್ದಾರೆ.

ಭಾರತ ಜಾತ್ಯಾತೀತ ದೇಶ. ಹಿಂದು, ಮುಸ್ಲಿಂ, ಸಿಖ್ಖರು ಎಲ್ಲರೂ ಭಾಯಿ ಭಾಯಿ ಅಂತ ಅದಕ್ಕೇ ಹೇಳುವುದು. ಸುಮ್ಮನೇ ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ. ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ ಎಂದಿದ್ದಾರೆ. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು. ಹೀಗೆ ಹೇಳಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ನನ್ನ ಮಕ್ಕಳೇನೂ ಜಿಹಾದಿಗಳಾಗಿ ಹುಟ್ಟುವುದಿಲ್ಲ ಎಂದಿದ್ದಾರೆ.

ಟ್ರೋಲ್‌ಗಳ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳುವುದಿಲ್ಲ. ನಾವು ಅದಕ್ಕೆ ಹೆಚ್ಚು ಗಮನ ಕೊಟ್ಟು ಪ್ರತಿಕ್ರಿಯಿಸಿದರೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಡಿ ಶೇಮಿಂಗ್ ಕೂಡ ಮಾಡಲಾಗುತ್ತಿದೆ. ಈ ಹಂತದಲ್ಲಿ ನಾನು ಸಣ್ಣ ಆಗಿದ್ದು ನೋಡಿ ಕೆಲವರು ಕಾಮೆಂಟ್ ಮಾಡ್ತಾರೆ. ಬರೀ ಬಾಡಿ ಶೇಮಿಂಗ್ ಅಲ್ಲ, ನಾನು ಮದುವೆ ಆದಾಗ ಬಹಳ ಟ್ರೋಲ್ ಮಾಡಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು ಎಂದು ಪ್ರಿಯಾಮಣಿ ನೋವು ತೋಡಿಕೊಂಡಿದ್ದಾರೆ.
ಕೋವಿಡ್ ನಂತರ ನಾನು ತೂಕ ಇಳಿಸಿಕೊಂಡಿದ್ದೇನೆ. ಆದರೆ ಹಲವರು ತುಂಬಾ ಸಣ್ಣಗಾಗಿದ್ದೇನೆ ಎಂದು ಬಾಡಿ ಶೇಮಿಂಗ್​ (Body shaming) ಮಾಡಿದರು. ಕೆಲವರು ಚೆನ್ನಾಗಿ ಕಾಣುವೆ ಎಂದರೂ ಅನೇಕ ಮಂದಿ ಕೆಟ್ಟದ್ದಾಗಿ ಮಾಡಿದರು. ಕೆಲವರು ಇನ್‌ಸ್ಟಾಗ್ರಾಂನಲ್ಲಿ ನೇರವಾಗಿ ಕಾಮೆಂಟ್ ಮಾಡ್ತಾರೆ. ಕೆಲವರು ಕೆಟ್ಟಾಗಿ ಕಾಮೆಂಟ್ ಮಾಡ್ತಾರೆ. ಅವ್ರು ಏನು ಹೇಳುತ್ತಾರೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯವಿಲ್ಲ, ಅಷ್ಟು ಕೆಟ್ಟದಾಗಿ ಇರುತ್ತದೆ. ಕೆಲವರನ್ನು ಬ್ಲಾಕ್ ಮಾಡ್ತೀನಿ. ಕೆಲವೊಂದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!