ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕ್ರಿತಿ ಸನೋನ್ ಸದ್ಯ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ. ತಮ್ಮ ಸಿನಿಮಾಗಳು ಹಾಗೂ ವಿಭಿನ್ನ ಪಾತ್ರಗಳಿಂದ ಕ್ರಿತಿ ಇಂಡಸ್ಟ್ರಿಯಲ್ಲಿ ಜಾಗ ಗಟ್ಟಿಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತೇರಿ ಬಾತೋ ಮೆ ಏಸೆ ಉಲ್ಜಾ ಜಿಯಾ ಸಿನಿಮಾದಲ್ಲಿ ರೊಬೊಟ್ ಪಾತ್ರದಲ್ಲಿ ಕ್ರಿತಿ ಮಿಂಚಿದ್ದರು. ಕ್ರಿತಿಯನ್ನು ಮದುವೆಯಾಗೋಕೆ ಹುಡುಗರ ಲೈನ್ ಇದೆ. ಆದರೆ ಕ್ರಿತಿಯನ್ನು ಮದುವೆ ಆಗೋ ಹುಡುಗನಿಗೆ ಕೆಲವು ಕ್ಯಾರೆಕ್ಟರ್ಸ್ ಇರಬೇಕಂತೆ..
ನೋಡೋಕೆ ಸುಂದರವಾಗಿರಬೇಕು, ಜಾಣನಾಗಿರಬೇಕು, ಹಣವಂತನಾಗಿರಬೇಕು, ಸಿಂಪಲ್ ಹುಡುಗ, ನನ್ನನ್ನು ನಗಿಸುವ ಗುಣವಿದ್ರೆ ಸಾಕು. ಗಂಟೆಗಟ್ಲೆ ಬೇಜಾರಿಲ್ಲದೆ ಕೂತು ಮಾತನಾಡಬೇಕು ಇನ್ನೂ ಸಾಕಷ್ಟು ಗುಣಗಳಿವೆ. ಆದರೆ ಎಲ್ಲ ಗುಣಗಳೂ ಇರುವ ಹುಡುಗ ಸಿಗ್ತಾನಾ ಅನ್ನೋದೇ ಡೌಟ್ ಎಂದು ಕ್ರಿತಿ ಹೇಳಿದ್ದಾರೆ.