ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದ ಮೊದಲ ಪಾಠ ಕಲಿಸಿದ, ಟ್ರ್ಯಾಪ್ ತಪ್ಪಿದ ಲೈಫ್‌ನ್ನು ಸರಿದಾರಿಗೆ ತಂದ, ಊರೆಲ್ಲಾ ಬೈದರೂ ನಿನ್ನನ್ನು ನಂಬುತ್ತೇನೆ ಎನ್ನುವ ಶಿಕ್ಷಕರು ಸಿಗೋದು ವಿರಳ. ಪ್ರತಿಬ್ಬರ ಜೀವನದಲ್ಲಿಯೂ ಶಿಕ್ಷಕರು ಮಹತ್ವದ ಪಾತ್ರ ವಹಿಸಿರುತ್ತಾರೆ. ಜೀವನ ಕಟ್ಟಿಕೊಳ್ಳುವಲ್ಲಿ ಸಹಕಾರ ನೀಡಿರುತ್ತಾರೆ.
ಇಲ್ಲೊಬ್ಬ ವಿದ್ಯಾರ್ಥಿ ತನ್ನ ಫೇವರೆಟ್ ಟೀಚರ್ ನಿವೃತ್ತಿ ಹೊಂದಿದ ದಿನ ಶಾಲೆಗೆ ಆಗಮಿಸಿ ಶಿಕ್ಷಕರಿಗೆ ಸ್ಕೂಟರ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ನಡೆಯಿಂದ ಜನರು ವಿದ್ಯಾರ್ಥಿಯನ್ನು ಶ್ಲಾಘಿಸಿದ್ದಾರೆ.
ಮೈಸೂರು ಜಿಲ್ಲೆಯ ಬಸವನಹಳ್ಳಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ, ಇಂಜಿನಿಯರ್ ಆದ ಉಮಾಶಂಕರ್ , ತಮ್ಮ ಶಿಕ್ಷಕರಾದ ಶ್ರೀನಿವಾಸಗೌಡ ಅವರು ವೃತ್ತಿಜೀವನ ಪೂರೈಸಿ ನಿವೃತ್ತರಾದ ಹಿನ್ನೆಲೆಯಲ್ಲಿ, 1.50 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್ ಸ್ಕೂಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶ್ರೀನಿವಾಸಗೌಡ ಅವರು, ಶಿಕ್ಷಕ ವೃತ್ತಿಗೆ ನೇಮಕಗೊಂಡಾಗ ತಿ.ನರಸೀಪುರ ತಾಲೂಕಿನ ಬಸವನಹಳ್ಳಿ ಪ್ರಾಥಮಿಕ ಶಾಲೆಗೆ ಪಾಠ ಮಾಡಲು ಆರಂಭಿಸಿದ್ದರು. ಆ ಗ್ರಾಮದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಉಮಾಶಂಕರ್ ಅವರು, ಬಿ.ಇ. ಓದಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಶ್ರೀನಿವಾಸ್‌ಗೌಡ ಅವರು ಇತ್ತೀಚೆಗೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ವಿಷಯ ತಿಳಿದು, ತಮ್ಮ ಊರಿನಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ, ನೆಚ್ಚಿನ ಗುರುವಿಗೆ ಬೈಕ್ ಅನ್ನು ನೀಡಿ, ಗುರು ಕಾಣಿಕೆ ಅರ್ಪಿಸಿದ್ದಾರೆ.
ನಮ್ ಸರ್ ಅಂದ್ರೆ ನಂಗಿಷ್ಟ! ನಿವೃತ್ತಿ ಹೊಂದಿದ ಟೀಚರ್‌ಗೆ ಸ್ಕೂಟರ್ ಕೊಡಿಸಿದ ವಿದ್ಯಾರ್ಥಿ

