January 30, 2026
Friday, January 30, 2026
spot_img

‘ದೇಶದ ಪರ ಮಾತನಾಡಿದರೆ ಬಿಜೆಪಿ ಪರ ಎಂದರ್ಥವಲ್ಲ’: ಶಶಿ ತರೂರ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ನಾನು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಬಿಜೆಪಿ ಪರವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ನನ್ನ ನಿಲುವು ಯಾವುದೇ ಪಕ್ಷದ ಪರವಲ್ಲ, ಅದು ಸಂಪೂರ್ಣವಾಗಿ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ವಿಚಾರ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರಗಳನ್ನು ಕೆಲವು ಸಂದರ್ಭಗಳಲ್ಲಿ ಬೆಂಬಲಿಸಿದರೆ ಅದನ್ನು ಬಿಜೆಪಿ ಪರವಾಗಿ ಮಾತನಾಡಿದಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾಸ್ತವದಲ್ಲಿ ನಾನು ಯಾವಾಗಲೂ ದೇಶದ ಹಿತದೃಷ್ಟಿಯಿಂದಲೇ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:

ಅಂತಾರಾಷ್ಟ್ರೀಯ ವಿಷಯಗಳಲ್ಲಿ ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ. ಇಂತಹ ವಿಚಾರಗಳಲ್ಲಿ ಪಕ್ಷಪಾತಕ್ಕಿಂತ ರಾಷ್ಟ್ರದ ಹಿತಾಸಕ್ತಿಯೇ ಮುಖ್ಯವಾಗಬೇಕು ಎಂಬ ನಿಲುವನ್ನು ನಾನು ಸದಾ ಕಾಯ್ದುಕೊಂಡಿದ್ದೇನೆ ಎಂದು ತರೂರ್ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !