January22, 2026
Thursday, January 22, 2026
spot_img

ಬೌದ್ಧ ಹಬ್ಬದ ಸಮಯ ಮಯನ್ಮಾರ್ ಸೇನೆ ದಾಳಿ: ಮಕ್ಕಳು ಸೇರಿ 40 ಜನರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೌದ್ಧ ಹಬ್ಬದ ಸಂದರ್ಭದಲ್ಲಿ ಮೋಟಾರ್ ಚಾಲಿತ ಪ್ಯಾರಾಗ್ಲೈಡರ್ ಜನಸಮೂಹದ ಮೇಲೆ ಮಯನ್ಮಾರ್ ಸೇನೆ ಬಾಂಬ್‌ ದಾಳಿ ನಡೆಸಿದ್ದು, ಮಕ್ಕಳು ಸೇರಿದಂತೆ 40 ಮಂದಿಯನ್ನು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಯನ್ಮಾರ್ ನಲ್ಲಿ ರಾಷ್ಟ್ರೀಯ ರಜಾದಿನವಾದ ಮತ್ತು ಬೌದ್ಧಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಥಾಡಿಂಗ್ಯುಟ್ ಹಬ್ಬವನ್ನು ಆಚರಿಸಲು ಸುಮಾರು 100 ಜನರು ಸೇರಿದ್ದಾಗ ಸೇನೆ ಈ ದುಷ್ಕೃತ್ಯ ಎಸಗಿದೆ.

ಪ್ಯಾರಾಗ್ಲೈಡರ್ ಜನಸಮೂಹದ ಮೇಲೆ ಎರಡು ಬಾಂಬ್‌ಗಳನ್ನು ಎಸೆದಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇನೆಯ ನೀತಿಗಳ ವಿರುದ್ಧ ಪ್ರತಿಭಟನೆಯಾಗಿ ಉತ್ಸವದ ಸಮಯದಲ್ಲಿ ಮೌನ ಬೆಳಕಿನ ಪ್ರದರ್ಶನವನ್ನು ಸಹ ನಡೆಸಲಾಯಿತು.

2021ರಲ್ಲಿ ಮಿಲಿಟರಿ ದಂಗೆಯ ನಂತರ ಮಯನ್ಮಾರ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ವಿಶ್ವಸಂಸ್ಥೆ ಅಂದಾಜಿನ ಪ್ರಕಾರ, ಈ ಅಂತರ್ಯುದ್ಧದಲ್ಲಿ 5,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.

ಪ್ಯಾರಾಗ್ಲೈಡರ್ ಬಂದು ಕೇವಲ ಏಳು ನಿಮಿಷಗಳಲ್ಲಿ ಎರಡು ಬಾಂಬ್‌ಗಳನ್ನು ಬೀಳಿಸಿದರು. ಮೊದಲ ಬಾಂಬ್ ಬಿದ್ದಾಗ ಹಲವು ಸಾವನ್ನಪ್ಪಿದ್ದು ನಾನು ಗಾಯಗೊಂಡೆ ಎಂದು ಅಧಿಕಾರಿ ಹೇಳಿದರು. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಈ ಘಟನೆಯನ್ನು ಖಂಡಿಸಿದ್ದು, ಸಮುದಾಯಗಳ ಮೇಲೆ ದಾಳಿ ಮಾಡಲು ಸೇನೆ ಪ್ಯಾರಾಗ್ಲೈಡರ್‌ಗಳನ್ನು ಬಳಸುವುದು ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಹೇಳಿದೆ.

Must Read