ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕಂಪ ಪೀಡಿತ ಆಗ್ನೇಯ ಏಷ್ಯಾದ ಮ್ಯಾನ್ಮಾರ್ ದೇಶದಲ್ಲಿ ಆಪರೇಷನ್ ಬ್ರಹ್ಮ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಈ ಮಧ್ಯೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭಾರತೀಯ ವಾಯುಪಡೆಯ ಸಿ -130 ಜೆ ವಿಮಾನವನ್ನು ಗುರಿಯಾಗಿಸಿಕೊಂಡು ಜಿಪಿಎಸ್-ಸ್ಪೂಫಿಂಗ್ ದಾಳಿ ನಡೆದಿದೆ.
ಈ ದಾಳಿಯು ವಿಮಾನ ಹಾರಾಟದ ನೈಜ-ಸಮಯದ ನಿರ್ದೇಶಾಂಕಗಳನ್ನು ಬದಲಾಯಿಸಿ, ವಿಮಾನದ ಸಂಚರಣೆ ವ್ಯವಸ್ಥೆಯನ್ನು ಹಾರಾಟದ ಮಧ್ಯದಲ್ಲಿ ದಾರಿ ತಪ್ಪಿಸಲು ಮಾಡಲಾಗಿತ್ತು. ಆದರೆ ತಕ್ಷಣವೇ ಎಚ್ಚೆತ್ತ ವಾಯುಪಡೆಯ ಪೈಲಟ್‌ಗಳು ಆಂತರಿಕ ಸಂಚರಣೆ ವ್ಯವಸ್ಥೆಗೆ (INS) ಮಾಹಿತಿ ರವಾನಿಸಿ, ಬಹುದೊಡ್ಡ ತೊಂದರೆಯಿಂದ ತಪ್ಪಿಸಿಕೊಂಡಿದೆ.
ಜಿಪಿಎಸ್ ವಂಚನೆ ಅಥವಾ ಜಿಪಿಎಸ್-ಸ್ಪೂಫಿಂಗ್ ಒಂದು ರೀತಿಯ ಸೈಬರ್ ದಾಳಿಯಾಗಿದ್ದು, ಇದರಲ್ಲಿ ನಿಜವಾದ ಉಪಗ್ರಹ ಡೇಟಾವನ್ನು ನಕಲಿ ಸಿಗ್ನಲ್‌ಗಳು ಅತಿಕ್ರಮಿಸಿ ವಿಮಾನ ಹಾರಾಟದ ವ್ಯವಸ್ಥೆಗಳಲ್ಲಿ ಗೊಂದಲವನ್ನುಟುಮಾಡುವುದಾಗಿದೆ.