ಮೈಸೂರು: ಶ್ರೀವ್ಯಾಸರಾಜ ವಿದ್ಯಾಪೀಠಕ್ಕೆ ವಿದ್ಯಾಶ್ರೀಶ ಶ್ರೀಗಳ ಸಾನ್ನಿಧ್ಯದಲ್ಲಿ ಭೂಮಿಪೂಜೆ

ಹೊಸದಿಗಂತ ಮೈಸೂರು:

ಹಳೆಯ ಮೈಸೂರು ಪ್ರಾಂತ್ಯದಲ್ಲಿ ತಮ್ಮದೇ ಭಕ್ತ ವೃಂದವನ್ನು ಹೊಂದಿರುವ ಶ್ರೀವ್ಯಾಸರಾಜ ಮಠದ(ಸೋಸಲೆ) ವತಿಯಿಂದ ಮೈಸೂರು ನಗರದ ಹೊರ ವಲಯದಲ್ಲಿ ಶ್ರೀವ್ಯಾಸರಾಜ ವಿದ್ಯಾಪೀಠ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಲಾಯಿತು.

ದಡದಹಳ್ಳಿ ಮಾರ್ಗದಲ್ಲಿರುವ ಶ್ರೀನಗರದಲ್ಲಿ ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿದ್ಯಾಪೀಠಕ್ಕೆ ಶ್ರೀ ವಿದ್ಯಾಶ್ರೀಶ ಸ್ವಾಮೀಜಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ವಿದ್ಯಾಶ್ರೀಶ ಶ್ರೀಪಾದಂಗಳು ತಾವು ಸ್ಥಾಪಿಸಿದ ಶ್ರೀವ್ಯಾಸತೀರ್ಥ ವಿದ್ಯಾಪೀಠಕ್ಕೆ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಬಯಕೆ ಹೊಂದಿದ್ದರು. ಅದರಂತೆ, ಶ್ರೀನಗರದಲ್ಲಿ ೩ ಎಕರೆ ಭೂಮಿಯನ್ನು ಖರೀದಿಸಲಾಗಿತ್ತು. ಇದೀಗ ಬಹು ದಿನಗಳ ಕನಸಿನಂತೆ ಕಟ್ಟಡ ತಲೆ ಎತ್ತಲಿದೆ. ೧೨ ಕೋಟಿ ರೂ. ವೆಚ್ಚದಲ್ಲಿ ಅಂದಾಜಿಸಲಾಗಿದ್ದು, ಪಾಠಶಾಲೆ, ಆಧುನಿಕ ಸೌಕರ್ಯಗಳನ್ನು ಒಳಗೊಂಡ ವಿದ್ಯಾರ್ಥಿನಿಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸಂಶೋಧನಾ ಕೇಂದ್ರ, ಭವ್ಯ ಸಭಾಂಗಣ, ಸಂಸ್ಕೃತ ಪಾಠಶಾಲೆ, ಯಾಗಶಾಲೆ, ಅಧ್ಯಾಪಕರ ವಸತಿಗೃಹ, ಆಟದ ಮೈದಾನ, ಗೋಶಾಲೆ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣವಾಗಲಿವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ.ಮಧುಸೂದನ್ ಆಚಾರ್ಯ ಮತ್ತಿತರರು ಹಾಜರಿದ್ದರು.

ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಶ್ರೀವ್ಯಾಸರಾಜ ವಿದ್ಯಾಪೀಠ ನಿರ್ಮಾಣಕ್ಕೆ ಶ್ರೀ ೧೦೦೮ ವಿದ್ಯಾಶ್ರೀಶ ಶ್ರೀಪಾದಂಗಳು ಚಾಲನೆ ನೀಡಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್, ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ.ಮಧುಸೂದನ್ ಆಚಾರ್ಯ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!