ಮೈಸೂರು ದಸರಾ: ಇಂದು ಸಿಎಂ ಸಿದ್ದರಾಮಯ್ಯ ಜತೆ ಹೈ ಪವರ್ ಕಮಿಟಿ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ವಿಶ್ವವಿಖ್ಯಾತ ದಸರಾ ಆಚರಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ, ಈ ಬಾರಿಯೂ ಅದ್ಧೂರಿ ದಸರಾ ಆಚರಣೆಗೆ ಚಿಂತನೆ ನಡೆಸಲಾಗಿದ್ದು, ಇಂದು ಸಿಎಂ ಸಿದ್ದರಾಮಯ್ಯ ಜತೆ ಹೈ ಪವರ್ ಕಮಿಟಿ ಸಭೆ ನಡೆಯಲಿದೆ.

ಮಂಡ್ಯ, ಚಾಮರಾಜನಗರ ಭಾಗದ ಪ್ರತಿನಿಧಿಗಳು ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸದ್ದಿಲ್ಲ, ಇನ್ನು ಮಳೆಯೂ ಉತ್ತಮವಾಗಿದ್ದು, ಅದ್ಧೂರಿ ಆಚರಣೆಯ ಎಲ್ಲ ಸಾಧ್ಯತೆಗಳಿವೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಅಕ್ಟೋಬರ್ 15ರಿಂದ ದಸರಾ ಆರಂಭವಾಗಲಿದ್ದು, 23ರಂದು ಆಯುಧ ಪೂಜೆ ಹಾಗೂ ೨೪ರಂದು ವಿಜಯದಶಮಿ ಜಂಬೂ ಸವಾರಿ ನಡೆಯಲಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಲಿಸ್ಟ್ ಮಾಡಿದ್ದು, ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರುವ ಸಾಧ್ಯತೆ ಇದೆ. ಇಡೀ ವಿಶ್ವವೇ ಎದುರು ನೋಡುವ ದಸರಾಕ್ಕಾಗಿ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!