‘ಮೈಸೂರು ಪಾಕ್’ ನಿಂದ ‘ಪಾಕ್’ ಮಾಯ: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಬದಲಾಯಿತು ಸ್ವೀಟ್ ಹೆಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ವಿರುದ್ಧ ಆಪರೇಷನ್ ಸಿಂದೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಜನರು ಕೂಡ ಪಾಕಿಸ್ತಾನದ ವಿರುದ್ಧ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ, ವ್ಯಾಪಾರಸ್ಥರು ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದಾರೆ.

ಇದೀಗ ಸ್ವೀಟ್ ಶಾಪ್ ವಿನೂತನ ರೀತಿಯಲ್ಲಿ ‘ಪಾಕ್’ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜಸ್ಥಾನದ ಜೈಪುರದ ಅಂಗಡಿ ಮಾಲೀಕರು ‘ಪಾಕ್‌’ ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧ ‘ಮೈಸೂರು ಪಾಕ್’ ಹೆಸರನ್ನೂ ಕೂಡ ಬದಲಾಯಿಸಲಾಗಿದೆ.

https://x.com/ChoosyBluesy/status/1925834186776051762?ref_src=twsrc%5Etfw%7Ctwcamp%5Etweetembed%7Ctwterm%5E1925834186776051762%7Ctwgr%5E6de8a336c278e0be5d5ed982b2eafe3d70f7b41e%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2025%2FMay%2F23%2Fmysore-pak-now-mysore-shree-jaipur-shops-rename-sweets-amid-india-pakistan-tensions

‘ಮೈಸೂರು ಪಾಕ್’ ಹೆಸರನ್ನು ‘ಮೈಸೂರು ಶ್ರೀ’ ಎಂದು ಬದಲಾಯಿಸಲಾಗಿದ್ದು, ಮೈಸೂರು ಪಾಕ್ ಮಾತ್ರವಲ್ಲದೇ ‘ಪಾಕ್’ ಹೆಸರು ಬರುವ ಎಲ್ಲ ಸಿಹಿತಿನಿಸುಗಳ ಹೆಸರುಗಳನ್ನು ‘ಶ್ರೀ’ಗೆ ಬದಲಿಸಲಾಗಿದೆ. ಸಿಹಿ ತಿನಿಸುಗಳಲ್ಲಿನ ‘ಪಾಕ್’ ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ಪಾಕ್ ಎಂಬ ಹೆಸರು ಇರಬಾರದು ಎಂದು ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

‘ನಾವು ನಮ್ಮ ಸಿಹಿ ತಿನಿಸುಗಳ ಹೆಸರಿನಿಂದ ‘ಪಾಕ್’ ಪದವನ್ನು ತೆಗೆದುಹಾಕಿದ್ದೇವೆ. ‘ಮೋತಿ ಪಾಕ್’ ಅನ್ನು ‘ಮೋತಿ ಶ್ರೀ’ ಎಂದು, ‘ಗೊಂಡ್ ಪಾಕ್’ ಅನ್ನು ‘ಗೊಂಡ್ ಶ್ರೀ’ ಎಂದೂ, ‘ಮೈಸೂರು ಪಾಕ್’ ಅನ್ನು ‘ಮೈಸೂರು ಶ್ರೀ’ ಎಂದು ಮರುನಾಮಕರಣ ಮಾಡಿದ್ದೇವೆ’ ಎಂದು ಅಂಗಡಿ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೀಮ್ ಗಳ ಸುರಿಮಳೆ
ಪಾಕಿಸ್ತಾನ ಮತ್ತು ಭಾರತದ ಸಂಘರ್ಷದ ನಡುವಿನ ಸಂದರ್ಭದಲ್ಲಿ ಮೈಸೂರ್‌ ಪಾಕ್‌ ಹೆಸರನ್ನು ಮೈಸೂರ್‌ ಭಾರತ್‌ ಮಾಡಬೇಕು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಹರಿದಾಡಿದ್ದವು. ಇದನ್ನೀಗ ವ್ಯಾಪಾರಿಗಳು ನಿಜ ಮಾಡಿದ್ದು, ಮೈಸೂರ್ ಪಾಕ್‌ ಹೆಸರನ್ನೂ ಬದಲಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!