March 30, 2026
Monday, March 30, 2026
spot_img

ಮೈಸೂರ್‌ ಸಿಲ್ಕ್‌ ಸೀರೆ ಅಂದ್ರೆ ಬರೀ ಸೀರೆ ಅಲ್ಲ ಅದೊಂದು ಎಮೋಷನ್‌! ಆನ್‌ಲೈನ್‌ ಸೇವೆ ಶೀಘ್ರವೇ ಬಂದ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ರಾಜ್ಯದ ಹೆಣ್ಣುಮಕ್ಕಳಿಗೆ ಮೈಸೂರು ಸಿಲ್ಕ್‌ ಸೀರೆ ಅಂದ್ರೆ ಬರೀ ಸೀರೆ ಅಲ್ಲ ಅದೊಂದು ಎಮೋಷನ್‌! ಈ ಮಾತನ್ನು ಒಪ್ತೀರಾ? ಬೆಳಗ್ಗೆ ಆರು ಗಂಟೆಯಿಂದ, ಮಧ್ಯರಾತ್ರಿಯಿಂದ ಮೈಸೂರು ಸಿಲ್ಕ್‌ ಅಂಗಡಿ ಮುಂದೆ ಕ್ಯೂ ನಿಲ್ಲೋ ಜನರಿಗೆ ಫ್ಯಾಷನ್‌ ಅಲ್ಲ, ಎಮೋಷನ್‌ ಅನ್ನಬಹುದು.

ಕೆಎಸ್‌ಐಸಿಯ ಮೈಸೂರು ಸಿಲ್ಕ್‌ ಸೀರೆಗಳನ್ನು ಆನ್‌ಲೈನ್‌ನಲ್ಲಿ ಕೊಳ್ಳುವ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಆನ್‌ಲೈನ್‌ ಸೇವೆಗಳನ್ನು ತೆಗೆಯುವ ಎಲ್ಲಾ ಸಾಧ್ಯತೆ ಇದೆ. ಮೈಸೂರು ಸಿಲ್ಕ್‌ ಸೀರೆಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಆದರೆ ಪೂರೈಕೆ ಕಡಿಮೆ ಇದೆ. ಈ ಕಾರಣದಿಂದ ಆನ್‌ಲೈನ್‌ ಮಾರಾಟ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ.

ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ಕೆಎಸ್‌ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ. ಆನ್‌ಲೈನ್ ಮಾರಾಟ ಆರಂಭವಾದ ನಂತರ ದೇಶದ ವಿವಿಧ ಭಾಗಗಳ ಗ್ರಾಹಕರು ಸುಲಭವಾಗಿ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿಸುವುದು ಸಾಧ್ಯವಾಯಿತು. ಆದರೆ ಈಗ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೈಸೂರು ಸಿಲ್ಕ್‌ ಸೀರೆ ಕೊಳ್ಳೋದು ಸಾಮಾನ್ಯ ಅಲ್ಲ. ಸಿಂಪಲ್‌ ಆದ ಮೈಸೂರು ಸಿಲ್ಕ್‌ ಸೀರೆಗೂ ನಲವತ್ತು ಸಾವಿರ ರೂಪಾಯಿ ಇರುತ್ತದೆ. ಆದರೂ ಜೀವನದಲ್ಲಿ ಒಂದಾದ್ರೂ ಮೈಸೂರು ಸಿಲ್ಕ್‌ ಉಡಲೇಬೇಕೆಂದು ಮಹಿಳೆಯರು ಸೇವಿಂಗ್ಸ್‌ ಮಾಡಿ ಖರೀದಿ ಮಾಡ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !