ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ರಾಜೀವ್ ಗಾಂಧಿ ಪ್ರಾಣಿಶಾಸ್ತ್ರ ಉದ್ಯಾನದಲ್ಲಿ ಕಳೆದ ಐದು ದಿನಗಳಲ್ಲಿ ನಿಗೂಢವಾಗಿ 14 ಜಿಂಕೆಗಳು ಸಾವಿಗೀಡಾಗಿವೆ.
ಝೂನಲ್ಲಿ ಪ್ರಾಣಿಗಳ ಸಾವು ಅಧಿಕಾರಿಗಳನ್ನು ಕಂಗೆಡಿಸಿದ್ದು, ಆಹಾರ, ಸ್ಥಳ ಸೇರಿದಂತೆ ಎಲ್ಲ ಕೋನಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಜಿಂಕೆಗಳಿಗೆ ಯಾವುದಾದರೂ ಸೋಂಕು ಹರಿಡಿದೆಯೇ ಎಂಬುದನ್ನೂ ಪತ್ತೆ ಮಾಡಲು ತನಿಖೆಗೆ ಸೂಚಿಸಲಾಗಿದೆ.
ಕಳೆದ ಐದು ದಿನಗಳಿಂದ ದಿನವೂ ಜಿಂಕೆಗಳು ಸರಣಿಯಾಗಿ ಪ್ರಾಣ ಕಳೆದುಕೊಳ್ಳುತ್ತಿವೆ. ಆಹಾರದ ಮೂಲಕ ಸೋಂಕು ಸೇರಿದಂತೆ ಎಲ್ಲ ರೀತಿಯಿಂದಲೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಪುಣೆ ಮಹಾನಗರ ಪಾಲಿಕೆಯ ಪಶುವೈದ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.