ನಮ್ಮ ಭಾರತೀಯ ಸಂಪ್ರದಾಯದಲ್ಲಿ ಕರ್ಪೂರಕ್ಕೆ ವಿಶೇಷ ಸ್ಥಾನವಿದೆ. ಕೇವಲ ಪೂಜೆಗೆ ಮಾತ್ರವಲ್ಲದೆ, ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗೂ ಕರ್ಪೂರ ರಾಮಬಾಣ. ಪ್ರತಿದಿನ ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಕರ್ಪೂರದ ಪುಡಿ ಹಾಕುವುದರಿಂದ ಹತ್ತಾರು ಲಾಭಗಳನ್ನು ಪಡೆಯಬಹುದು.
ಮಾನಸಿಕ ಒತ್ತಡ ನಿವಾರಣೆ
ರೋಡೀಡೀ ಕೆಲಸ ಮಾಡಿ ಸುಸ್ತಾಗಿದ್ದರೆ, ಕರ್ಪೂರ ಮಿಶ್ರಿತ ನೀರಲ್ಲಿ ಸ್ನಾನ ಮಾಡಿ. ಇದರ ಸುವಾಸನೆಯು ನರಗಳನ್ನು ಶಾಂತಗೊಳಿಸಿ, ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ತಕ್ಷಣವೇ ದೂರ ಮಾಡುತ್ತದೆ. ನಿಮಗಿರುವ ಆಯಾಸ ಮಾಯವಾಗಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.
ಚರ್ಮದ ಸೋಂಕು ಹಾಗೂ ತುರಿಕೆಗೆ ಬ್ರೇಕ್
ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ (Antibacterial) ಗುಣಗಳಿವೆ. ಇದು ಚರ್ಮದ ಮೇಲಿನ ತುರಿಕೆ, ಕಜ್ಜಿಯಂತಹ ಅಲರ್ಜಿಗಳನ್ನು ಗುಣಪಡಿಸುತ್ತದೆ. ಚಳಿಗಾಲದಲ್ಲಿ ಕಾಡುವ ಚರ್ಮದ ಶುಷ್ಕತೆಯನ್ನು ಇದು ನಿವಾರಿಸುತ್ತದೆ.
ದೇಹದ ದುರ್ವಾಸನೆಗೆ ಮುಕ್ತಿ
ಅತಿಯಾದ ಬೆವರಿನಿಂದ ದೇಹದ ದುರ್ವಾಸನೆ ಉಂಟಾಗುತ್ತಿದ್ದರೆ ಕರ್ಪೂರ ಅತ್ಯುತ್ತಮ ಪರಿಹಾರ. ಇದು ದೇಹಕ್ಕೆ ನೈಸರ್ಗಿಕ ಸುಗಂಧವನ್ನು ನೀಡಿ, ದಿನವಿಡೀ ನಿಮ್ಮನ್ನು ಫ್ರೆಶ್ ಆಗಿಡುತ್ತದೆ.
ಸ್ನಾಯು ನೋವು ಕಡಿಮೆ ಮಾಡುತ್ತದೆ
ಬೆನ್ನು ನೋವು, ಕೀಲು ನೋವು ಅಥವಾ ಸ್ನಾಯು ಸೆಳೆತದಿಂದ ಬಳಲುತ್ತಿರುವವರಿಗೆ ಕರ್ಪೂರದ ನೀರು ರಾಮಬಾಣ. ಇದು ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ದೇಹದ ನೋವನ್ನು ತಗ್ಗಿಸುತ್ತದೆ.
ಗಮನಿಸಿ: ಸೂಕ್ಷ್ಮ ಚರ್ಮ ಇರುವವರು ಕರ್ಪೂರ ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಉತ್ತಮ.



