ಭಕ್ತಿಯ ಮಾರ್ಗದಲ್ಲಿ ದೇವತೆಗಳಿಗೆ ಅರ್ಪಣೆಯು ಒಂದು ಮುಖ್ಯವಾದ ಅಂಶವಾಗಿದೆ. ಹಿಂದು ಪುರಾಣಗಳಲ್ಲಿ ಪ್ರತಿಯೊಂದು ದೇವತೆಯೂ ವಿಭಿನ್ನ ಸ್ವಭಾವ ಮತ್ತು ಇಷ್ಟಗಳಿಗೆ ಹೊಂದಿಕೊಂಡಿರುತ್ತಾರೆ. ಈ ಇಷ್ಟಗಳಲ್ಲಿ ಆಹಾರವೂ ಪ್ರಮುಖವಾಗಿದೆ. ದೇವತೆಗಳಿಗೆ ಅವರ ಇಷ್ಟದ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸುವುದು ಭಕ್ತರು ಅನುಸರಿಸುವ ಒಂದು ಪವಿತ್ರ ಆಚರಣೆ. ಈ ಲೇಖನದಲ್ಲಿ, ಪುರಾಣಗಳ ಪ್ರಕಾರ ವಿವಿಧ ಹಿಂದು ದೇವತೆಗಳು ಇಷ್ಟಪಡುವ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.
ಭಗವಾನ್ ವಿಷ್ಣು
ಭಗವಾನ್ ವಿಷ್ಣುಗೆ ಹಳದಿ ಬಣ್ಣ ಎಂದರೆ ತುಂಬಾನೇ ಒಲವು. ಅವರು ಜೇನುತುಪ್ಪ, ಕಡಲೆ ಬೇಳೆ ಮತ್ತು ಬಾಳೆಹಣ್ಣುಗಳನ್ನು ಇಷ್ಟಪಡುತ್ತಾರೆ. ಜೊತೆಗೆ ಭಗವಾನ್ ವಿಷ್ಣುವನ್ನು ತುಂಬಾ ಆಹಾರಗಳನ್ನು ಇಟ್ಟು ಪೂಜಿಸಲಾಗುತ್ತದೆ, ಇದರಲ್ಲಿ 56 ರೀತಿಯ ಬೇಯಿಸಿದ ಮತ್ತು ಬೇಯಿಸದ ಆಹಾರ ಪದಾರ್ಥಗಳು ಸೇರಿರುತ್ತವೆ.
ಶಿವ
ಶಾಸ್ತ್ರಗಳ ಪ್ರಕಾರ ಮಹಾಯೋಗಿ ಶಿವನಿಗೆ ಕಂದಮೂಲ ಫಲ ಇಷ್ಟ, ಕೋಸಂಬರಿ, ಬೆಲ್ಲದ ಅವಲಕ್ಕಿ ಹಾಲು, ಮತ್ತು ಬಿಳಿ ಬಣ್ಣದ ಸಿಹಿತಿಂಡಿಗಳು ಎಂದರೆ ತುಂಬಾನೇ ಇಷ್ಟವಂತೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.
ಭಗವಾನ್ ಶನಿ
ಭಗವಾನ್ ಶನಿ ಅವರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾರೆ ಮತ್ತು ಅವರ ನೆಚ್ಚಿನ ಆಹಾರಗಳಲ್ಲಿ ಬೆಲ್ಲದಿಂದ ಮಾಡಿದ ಕಪ್ಪು ಎಳ್ಳು ಲಡ್ಡುಗಳು ಮತ್ತು ಕಪ್ಪು ಬೇಳೆಗಳಿಂದ ಮಾಡಿದ ಖಿಚಡಿ ಸೇರಿವೆ.
ಸರಸ್ವತಿ ದೇವತೆ
ತಾಯಿ ಸರಸ್ವತಿ ದೇವಿಗೆ ತಾಜಾ ಹಣ್ಣು, ಅನ್ನ, ಅವಲಕ್ಕಿ ಮತ್ತು ಮೊಸರನ್ನು ಸಹ ನೀಡಲಾಗುತ್ತದೆ. ಸರಸ್ವತಿ ದೇವತೆಯ ಪೂಜೆಯ ಸಮಯದಲ್ಲಿ ದೇವಿಗೆ ಬೂಂದಿ ಮತ್ತು ಸೇವ್ ಅನ್ನು ಸಹ ನೀಡಲಾಗುತ್ತದೆ.
ಲಕ್ಷ್ಮಿ ದೇವತೆ
ಕೀರ್ತಿ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿಗೆ ಪಾಯಸ ಮತ್ತು ಸಿಹಿ ಅವಲಕ್ಕಿ ನೆಚ್ಚಿನ ಆಹಾರ ಎಂದು ಹೇಳಲಾಗುತ್ತದೆ.
ಶ್ರೀ ಕೃಷ್ಣ
ಪುಟ್ಟ ಕೃಷ್ಣನಿಗೆ ಏನು ಅಚ್ಚು ಮೆಚ್ಚು ಅಂತ ಬಹುತೇಕರಿಗೆ ಗೊತ್ತಿರುತ್ತದೆ. ಹೌದು ಭಗವಾನ್ ಶ್ರೀ ಕೃಷ್ಣ ಪರಮಾತ್ಮನಿಗೆ ಬೆಣ್ಣೆ ಹಾಲು, ಮತ್ತು ಸಿಹಿಯಾದ ಲಡ್ಡುಗಳು ಎಂದರೆ ತುಂಬಾನೇ ಇಷ್ಟ.
ಗಣೇಶ
ಗಣೇಶ ಆಹಾರಪ್ರಿಯ. ಇವರಿಗೆ ಮೋದಕ ಮತ್ತು ಲಡ್ಡುಗಳು ಎಂದರೆ ತುಂಬಾನೇ ಪ್ರೀತಿ ಎಂದು ನಮಗೆಲ್ಲರಿಗೂ ತಿಳಿದಿದೆ.