April 11, 2026
Saturday, April 11, 2026
spot_img

Mythology | ಬ್ರಹ್ಮ ಸೃಷ್ಟಿಸಿದ ಸುದಿನ.. ಯುಗಾದಿ ಹಬ್ಬದ ಇತಿಹಾಸದ ಬಗ್ಗೆ ನಿಮಗೇನು ಗೊತ್ತು?

ಹಿಂದು ಸಂಪ್ರದಾಯದ ಪ್ರಕಾರ ‘ಯುಗಾದಿ’ ಎಂದರೆ ಕೇವಲ ಹಬ್ಬವಲ್ಲ, ಅದು ಹೊಸ ಕಾಲದ ಉದಯ. ‘ಯುಗ’ ಮತ್ತು ‘ಆದಿ’ ಎಂಬ ಎರಡು ಪದಗಳ ಸೇರ್ಪಡೆಯೇ ಯುಗಾದಿ. ಅಂದರೆ ಹೊಸ ಯುಗದ ಆರಂಭ ಎಂದರ್ಥ.

ಪುರಾಣಗಳ ಪ್ರಕಾರ, ಬ್ರಹ್ಮದೇವನು ಈ ಜಗತ್ತನ್ನು ಸೃಷ್ಟಿಸಲು ಆರಂಭಿಸಿದ್ದು ಇದೇ ದಿನ (ಚೈತ್ರ ಮಾಸದ ಶುದ್ಧ ಪಾಡ್ಯಮಿ). ಹಾಗಾಗಿಯೇ ಇದನ್ನು ‘ಸೃಷ್ಟಿಯ ಜನ್ಮದಿನ’ ಎಂದೂ ಕರೆಯಲಾಗುತ್ತದೆ. ಇದೇ ದಿನದಂದು ಶ್ರೀರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿ ಪಟ್ಟಾಭಿಷಿಕ್ತನಾದನು ಎಂಬ ನಂಬಿಕೆಯೂ ಇದೆ.

ಹಬ್ಬವನ್ನು ಏಕೆ ಆಚರಿಸಬೇಕು?

ಚಳಿಗಾಲ ಮುಗಿದು ವಸಂತ ಋತು ಕಾಲಿಡುವ ಸಮಯವಿದು. ಮರಗಿಡಗಳು ಚಿಗುರಿ, ಪ್ರಕೃತಿ ನವವಧುವಿನಂತೆ ಕಂಗೊಳಿಸುತ್ತದೆ. ಈ ಬದಲಾವಣೆಯನ್ನು ಸಂಭ್ರಮಿಸಲು ಹಬ್ಬ ಆಚರಿಸಲಾಗುತ್ತದೆ.

ಜೀವನವೆಂದರೆ ಕೇವಲ ಸುಖವಲ್ಲ, ಕಷ್ಟ-ಸುಖಗಳ ಮಿಶ್ರಣ. ಸಿಹಿಯಾದ ಬೆಲ್ಲ ಮತ್ತು ಕಹಿಯಾದ ಬೇವನ್ನೊಟ್ಟಿಗೆ ಸವಿಯುವ ಮೂಲಕ ಮುಂಬರುವ ವರ್ಷದ ಎಲ್ಲಾ ಏಳುಬೀಳುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದೇ ಇದರ ಉದ್ದೇಶ.

ಹೊಸ ಬಟ್ಟೆ ತೊಟ್ಟು, ತಳಿರು ತೋರಣ ಕಟ್ಟಿ, ಪಂಚಾಂಗ ಶ್ರವಣ ಮಾಡುವ ಮೂಲಕ ನಮ್ಮ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸುವ ಸುಸಮಯವಿದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !