Mythology | ಊರ್ಮಿಳೆಗೆ ನಿದ್ರೆಯೂ ವರವಾಯ್ತು: 14 ವರ್ಷ ಆಕೆ ಮಲಗಿದ್ದು ಯಾಕೆ ಗೊತ್ತಾ?

ಮಹಾಭಾರತದಲ್ಲಿ ಕರ್ಣದುರಂತ ನಾಯಕ ಇದ್ದಂತೆ, ರಾಮಾಯಣದಲ್ಲಿ ಲಕ್ಷ್ಮಣ ಒಂದು ರೀತಿಯ ದುರಂತನಾಯಕ. ಆತನ ಪತ್ನಿ ಊರ್ಮಿಳಾ ಇನ್ನೊಂದು ರೀತಿಯ ದುರಂತ ನಾಯಕಿ. ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರ ಇದ್ದು ಆತನ ಯಶಸ್ಸಿಗಾಗಿ ಪ್ರಾರ್ಥಿಸಿ,ದ ಊರ್ಮಿಳಾ ಕತೆ ಬಹುತೇಕರಿಗೆ ತಿಳಿದೇ ಇಲ್ಲ.

ರಾಮ ಸೀತೆಯನ್ನು ಮದುವೆಯಾದಾಗ, ಆಕೆಯ ಸಹೋದರಿ ಎನಿಸಿಕೊಂಡಿದ್ದ ಊರ್ಮಿಳಾಳನ್ನು ಲಕ್ಷ್ಮಣ ವಿವಾಹವಾಗಿದ್ದ. ರಾಮ ಕಾಡಿಗೆ ಹೋಗಲು ಹೊರಟು ನಿಂತಾಗ ಲಕ್ಷ್ಮಣ ಕೂಡಾ ತನ್ನ ಪತ್ನಿ ಊರ್ಮಿಳಾಳನ್ನು ಬಿಟ್ಟು ರಾಮನ ಜೊತೆ ವನವಾಸಕ್ಕೆ ತೆರಳಿದ್ದ.

ಕಾಡಿನಲ್ಲಿ ಅಣ್ಣ ಅತ್ತಿಗೆಯ ಸೇವೆ ಮಾಡುತ್ತಾ ರಾತ್ರಿಯಾದರೂ ಲಕ್ಷ್ಮಣ ನಿದ್ರೆ ಮಾಡಲಿಲ್ಲ ಹೀಗಾಗಿ ನಿದ್ರಾ ದೇವತೆ ಲಕ್ಷ್ಮಣ ಮುಂದೆ ಪ್ರತ್ಯಕ್ಷವಾಗಿ ಲಕ್ಷ್ಮಣನಿಗೆ ನಮಸ್ಕರಿಸುತ್ತಾಳೆ ಆಗ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ನನಗೆ ನಿದ್ರೆಯಿಂದ ಮುಕ್ತಿ ನೀಡುವಂತೆ ನಿದ್ರಾ ದೇವಿಯ ಬಳಿ ಬೇಡಿಕೊಳ್ಳುತ್ತಾನೆ. ಲಕ್ಷ್ಮಣನ ಬೇಡಿಕೆಯನ್ನು ನಿದ್ರಾ ದೇವತೆ ಒಪ್ಪಿಕೊಳ್ಳುತ್ತಾಳೆ. ಆದರೆ ನಿದ್ರಾ ದೇವಿ ನಿನ್ನ ಪಾಲಿನ ನಿದ್ರೆಯನ್ನ ಬೇರೆ ಯಾರಾದರೂ ಪಡೆಯಬೇಕು ಎಂದು ಹೇಳುತ್ತಾಳೆ.

ಆಗ ಲಕ್ಷ್ಮಣ ನನ್ನ ಪಾಲಿನ ನಿದ್ರೆಯನ್ನ ಪತ್ನಿ ಊರ್ಮಿಳಾಗೆ ಕೊಡುವಂತೆ ದೇವಿಯ ಮುಂದೆ ಹೇಳುತ್ತಾನೆ. ನಿದ್ರಾದೇವಿಯು ಈ ವರವನ್ನು ಊರ್ಮಿಳಾಗೆ ಧಾರೆ ಎರೆಯುತ್ತಾಳೆ. ಲಕ್ಷ್ಮಣನ ಈ ವರದಿಂದ ಊರ್ಮಿಳಾ ಹದಿನಾಲ್ಕು ವರ್ಷಗಳ ಕಾಲ ನಿದ್ದೆ ಮಾಡುತ್ತಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!