Friday, September 12, 2025

Myths | ಇದೆ ನೋಡಿ ಡಯಾಬಿಟಿಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳು!

ಡಯಾಬಿಟಿಸ್‌ ಎಂಬುದು ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಈ ಕಾಯಿಲೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಜನರ ನಡುವೆ ಹರಡಿಕೊಂಡಿವೆ. ಕೆಲವರು ಕೇಳಿದ ಮಾತನ್ನು ನಂಬಿ ತಮ್ಮ ಜೀವನಶೈಲಿಯನ್ನು ಬದಲಾಯಿಸುತ್ತಾರೆ. ಆದರೆ ಎಲ್ಲ ಮಾಹಿತಿಯೂ ಸರಿಯೇ ಅನ್ನುವುದು ನಿರ್ಧರಿಸಲು ಸಾಧ್ಯವಿಲ್ಲ. ಡಯಾಬಿಟಿಸ್‌ ಕುರಿತಂತೆ ಜನರಲ್ಲಿ ಇರುವ ಕೆಲವು ಗಾಸಿಪ್ ಗಳು ಮತ್ತು ಅದಕ್ಕೆ ಸಂಬಂಧಿಸಿದ ನಿಜವಾದ ಸಂಗತಿಗಳನ್ನು ತಿಳಿದುಕೊಳ್ಳೋಣ.

ಸಿಹಿ ತಿಂದರೆ ಮಾತ್ರ ಡಯಾಬಿಟಿಸ್ ಬರುತ್ತದೆ
ಡಯಾಬಿಟಿಸ್ ಕೇವಲ ಸಿಹಿ ತಿನ್ನುವುದರಿಂದ ಬರುವ ಕಾಯಿಲೆಯಲ್ಲ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವುದು ಅಥವಾ ದೇಹವು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯಿಸದಿರುವುದು ಇದಕ್ಕೆ ಪ್ರಮುಖ ಕಾರಣ. ಸಿಹಿ ಆಹಾರ ಹೆಚ್ಚು ಸೇವಿಸಿದರೆ ತೂಕ ಹೆಚ್ಚುವ ಮೂಲಕ ಅಪಾಯ ಹೆಚ್ಚಾಗಬಹುದು, ಆದರೆ ಅದು ಏಕೈಕ ಕಾರಣವಲ್ಲ.

ಡಯಾಬಿಟಿಸ್ ಆದ್ರೆ ಹಣ್ಣು ತಿನ್ನಬಾರದು
ಡಯಾಬಿಟಿಸ್‌ ಇರುವವರು ಹಣ್ಣು ತಿನ್ನಬಹುದು. ಆದರೆ ಹಣ್ಣುಗಳ ಪ್ರಮಾಣ ಮತ್ತು ಸಮಯವನ್ನು ನಿಯಂತ್ರಿಸುವುದು ಮುಖ್ಯ. ಬಾಳೆಹಣ್ಣು, ಮಾವು, ದ್ರಾಕ್ಷಿ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಸೇಬು, ಪೇರಳೆ, ಪಪ್ಪಾಯಿ ಹಣ್ಣುಗಳು ಉತ್ತಮ ಆಯ್ಕೆ.

ಡಯಾಬಿಟಿಸ್ ಗುಣವಾಗಬಹುದು
ಡಯಾಬಿಟಿಸ್ ಒಂದು ಜೀವನಪೂರ್ತಿ ನಿರ್ವಹಿಸಬೇಕಾದ ಕಾಯಿಲೆ. ಸರಿಯಾದ ಆಹಾರ ನಿಯಮ, ವ್ಯಾಯಾಮ, ಔಷಧಿ ಮತ್ತು ನಿಯಮಿತ ತಪಾಸಣೆ ಮೂಲಕ ಇದನ್ನು ನಿಯಂತ್ರಿಸಬಹುದು. ಆದರೆ “ಪೂರ್ಣ ಗುಣ” ಆಗುವುದು ಅತಿ ಅಪರೂಪ.

ಇನ್ಸುಲಿನ್ ತೆಗೆದುಕೊಳ್ಳೋದ್ರಿಂದ ವ್ಯಸನವಾಗುತ್ತದೆ
ಇನ್ಸುಲಿನ್‌ ದೇಹಕ್ಕೆ ಅಗತ್ಯವಾದ ಹಾರ್ಮೋನ್. ಡಾಕ್ಟರ್ ಸಲಹೆಯಂತೆ ತೆಗೆದುಕೊಳ್ಳುವ ಇನ್ಸುಲಿನ್ ವ್ಯಸನಕ್ಕೆ ಕಾರಣವಾಗುವುದಿಲ್ಲ. ಬದಲಿಗೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ಡಯಾಬಿಟಿಸ್ ಇದ್ದರೆ ಸಾಮಾನ್ಯ ಜೀವನ ಸಾಧ್ಯವಿಲ್ಲ
ಡಯಾಬಿಟಿಸ್ ಇದ್ದರೂ ಆರೋಗ್ಯಕರ ಜೀವನ ನಡೆಸಬಹುದು. ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಒತ್ತಡ ನಿಯಂತ್ರಣ ಮತ್ತು ವೈದ್ಯರ ಸಲಹೆಯನ್ನು ಅನುಸರಿಸುವುದರಿಂದ ಯಾವುದೇ ತೊಂದರೆ ಇಲ್ಲದೆ ದೀರ್ಘಕಾಲ ಜೀವನ ನಡೆಸಬಹುದು.

ಇದನ್ನೂ ಓದಿ