ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಲ್ಲಿಂದು ನಾಗರ ಪಂಚಮಿ ಹಬ್ಬದ ಸಂಭ್ರಮ. ಎಲ್ಲೆಡೆ ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ.
ಅದೇ ರೀತಿ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಕೂಡ ನಾಗರಪಂಚಮಿ ಹಬ್ಬವನ್ನು ಆಚರಿಸಿದ್ದಾರೆ.
ಚಿತ್ರರಂಗದಲ್ಲಿ ನಟಿಯಾಗಿ ಪ್ರಣಿತಾ ಗುರುತಿಸಿಕೊಳ್ಳುತ್ತಿದ್ದರು ಕೂಡ ಹಿಂದು ಸಂಪ್ರದಾಯ ಮತ್ತು ಹಬ್ಬಗಳ ಸದಾ ಆಚರಿಕೊಳ್ಳತಾ ಬರುತ್ತಿರುವ ಪ್ರಣೀತಾ , ನಾಗರಪಂಚಮಿ ಹಬ್ಬವನ್ನ ಕುಟುಂಬದ ಜೊತೆ ಆಚರಿಸಿದ್ದಾರೆ. ನಾಗದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಅತ್ತೆಯೊಂದಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.