ಗಿನ್ನಿಸ್ ದಾಖಲೆ ಬರೆದ ಮೆಟ್ರೋ: ವಿಶ್ವದ ಅತಿ ಉದ್ದದ ರಚನೆ ಎಂಬ ಗುರುತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದ ನಾಗ್ಪುರ ಮೆಟ್ರೋ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದೆ. ವಾರ್ಧಾ ರಸ್ತೆ ಪ್ರದೇಶದಲ್ಲಿ ನೆಲೆಗೊಂಡಿರುವ 3.14 ಕಿಮೀ ಡಬಲ್ ಡೆಕ್ಕರ್ ವಯಡಕ್ಟ್ ಮೆಟ್ರೋ ವಿಶ್ವದ ಅತಿ ಉದ್ದದ ರಚನೆ ಎಂದು ಗುರುತಿಸಲ್ಪಟ್ಟಿದೆ. ಈ ಡಬಲ್ ಡೆಕ್ಕರ್ ವಯಡಕ್ಟ್ ಈಗಾಗಲೇ ಏಷ್ಯಾದ ಅತಿದೊಡ್ಡ ರಚನೆ ಎಂದು ಗುರುತಿಸಲ್ಪಟ್ಟಿದೆ. ಈ ಭಾಗದಲ್ಲಿ ಮೆಟ್ರೋ ರೈಲು ಮತ್ತು ಮಧ್ಯದಲ್ಲಿ ಹೆದ್ದಾರಿ ಮೇಲ್ಸೇತುವೆ ಇದೆ. ಕೆಳಗೆ ಈಗಿರುವ ರಸ್ತೆಯೇ ಮುಂದುವರಿಯಲಿದೆ ಎಂದು ಮಹಾ ಮೆಟ್ರೋ ಎಂಡಿ ಬ್ರಿಜೇಶ್ ದೀಕ್ಷಿತ್ ಹೇಳಿದ್ದಾರೆ.

ಈ ಮೆಟ್ರೋ ಯೋಜನೆಯು ಈಗಾಗಲೇ ಏಷ್ಯಾ ಬುಕ್ ಮತ್ತು ಇಂಡಿಯಾ ಬುಕ್‌ನಿಂದ ಪ್ರಶಸ್ತಿಗಳನ್ನು ಗೆದ್ದಿದೆ. ಹೆದ್ದಾರಿ ಮೇಲ್ಸೇತುವೆ, ಮೆಟ್ರೋ ರೈಲು, ಅಂಡರ್ ಪಾಸ್ ರಸ್ತೆ… ವಾರ್ಧಾ ರಸ್ತೆಯಲ್ಲಿದೆ. ಈ ವಿಧಾನದಿಂದ ಹೆಚ್ಚುವರಿ ಭೂಸ್ವಾಧೀನ ತಪ್ಪಿಸಬಹುದು. ನಿರ್ಮಾಣ ಸಮಯ ಮತ್ತು ಯೋಜನಾ ವೆಚ್ಚ ಕೂಡಾ ಕಡಿಮೆಯಾಗಿದೆ. ಫ್ಲೈಓವರ್ ಹೆದ್ದಾರಿಯನ್ನು ಒಂಭತ್ತು ಮೀಟರ್ ಎತ್ತರದಲ್ಲಿ ಮತ್ತು ಮೆಟ್ರೋವನ್ನು 20 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಬಹುಪದರದ ಕಾರಿಡಾರ್‌ನ 2.7 ಕಿಮೀ ಎರಡನೇ ಹಂತದಲ್ಲಿ ನಾಲ್ಕು ಪಥದ ರಸ್ತೆಯನ್ನು ಹೊಂದಿದ್ದರೆ, ಅರ್ಧ ಕಿಮೀ ಆರು ಪಥದ ರಸ್ತೆಯನ್ನು ಹೊಂದಿದೆ.

ಅಧಿಕಾರಿಗಳ ವಿವರಗಳ ಪ್ರಕಾರ, ಈ ಯೋಜನೆಯ ಭೂಸ್ವಾಧೀನ ಮತ್ತು ನಿರ್ಮಾಣದ ವೆಚ್ಚವನ್ನು ಉಳಿಸಲು ಈ ವ್ಯವಸ್ಥೆಯು ತುಂಬಾ ಉಪಯುಕ್ತವಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿ 30 ನಿಮಿಷವಾಗಿದ್ದರೆ, ಈಗ ಅದನ್ನು ನಾಲ್ಕು ನಿಮಿಷಕ್ಕೆ ಇಳಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ.. ನಾಗ್ಪುರ ಮೆಟ್ರೋ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ದಾಖಲೆಯನ್ನು ಸಾಧಿಸಿರುವ ಎನ್‌ಎಚ್‌ಎಐ ಮತ್ತು ಮಹಾ ಮೆಟ್ರೋಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!