ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನುಷವಾಗಿ ಯುವಕನೋರ್ವನನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಐವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಸಂತೋಷ ಬಾಬು ತಿಳಿಸಿದರು.
ಇಲ್ಲಿಯ ಶಹರ ಪೊಲೀಸ್ ಠಾಣಾಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಘಟನೆ ನಡೆದಿದ್ದು, ಇದು ಅತ್ಯಂತ ಹೀನ ಕೃತ್ಯವಾಗಿದೆ. ಈ ವಿಷಯ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ದುಷ್ಕರ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಹಲ್ಲೆಗೊಳಗಾದ ಯುವಕ ಹೆಸರು ಪ್ರಜ್ವಲ ಸೊಳಂಕಿ ಎಂದು ತಿಳಿದು ಬಂದಿದೆ. ಪ್ರಜ್ವಲ್, ವಿನಾಯಕ, ಗಣೇಶ, ಸಚಿವ ಹಾಗೂ ಮಂಜುನಾಥ ಎಂಬುವರು ಹಲ್ಲೆ ನಡೆಸಿದವರು ಎಂದು ಹೇಳಿದರು.
ಪ್ರಜ್ವಲ್ ಎಂಬಾತ ತಾಯಿಯ ಬಗ್ಗೆ ಇಸ್ಟಾಗ್ರಾಂ ನಲ್ಲಿ ಅವಾಚ್ಯ ಪದಗಳಿನಿಂದ ನಿಂದಿಸಿದ್ದರಿಂದ ಕುಡಿದ ಮತ್ತಿನಲ್ಲಿ ಸಂದೀಪ ನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದರು.
ಹಲ್ಲೆಗೊಳಗಾದ ವ್ಯಕ್ತಿ ಧಾರವಾಡ ದವರು ಎಂಬುದು ತಿಳಿದಿದ್ದು, ಇನ್ನೂ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಪ್ರಕರಣ ದಾಖಲಿಸಿದರೆ ಅಥವಾ ನಾವೇ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.
ಯುವಕನ ಶೋಧ ನಡೆಸಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.