ಯೋಗಿ ನಾಡಲ್ಲಿ ಮುಂದುವರೆದ ಹೆಸರು ಬದಲಾವಣೆ: ಫತೇಹಾಬಾದ್ ಗೆ ‘ಸಿಂಧೂರಪುರಂ’ ನಾಮಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆ ಮುಂದುವರೆದಿದೆ. ಇದೀಗ ಆಗ್ರಾದ ಫತೇಹಾಬಾದ್ ಪಟ್ಟಣ ಮತ್ತು ಬಾದಶಾಹಿ ಬಾಗ್ ಪ್ರದೇಶದ ಹೆಸರನ್ನು ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.

ಫತೇಹಾಬಾದ್ ಪಟ್ಟಣದ ಹೆಸರನ್ನು ಸಿಂಧೂರಪುರಂ ಮತ್ತು ಬಾದಶಾಹಿ ಬಾಗ್ ಪ್ರದೇಶದ ಹೆಸರನ್ನು ಬ್ರಹ್ಮಪುರಂ ಎಂದು ಮರು ನಾಮಕರಣ ಮಾಡಲಾಗುತ್ತಿದೆ.

ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜು ಭಡೋರಿಯಾ ಅವರು ಈ ಕುರಿತು ಪ್ರಸ್ತಾವನೆಯನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಿದರು. ಇದೀಗ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ.

ಈ ಪ್ರದೇಶಗಳು ಗುಲಾಮಗಿರಿ ಸಂಕೇತಿಸುವುದರಿಂದ ಹೆಸರು ಬದಲಾವಣೆಗಳನ್ನು ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಡೋರಿಯಾ ಹೇಳಿದರು. ಫತೇಹಾಬಾದ್ ಪಟ್ಟಣವನ್ನು ಹಿಂದೆ ಸಮುಘರ್ ಎಂದು ಕರೆಯಲಾಗುತ್ತಿತ್ತು. ಇದನ್ನು ಸಿಂಧೂರಪುರಂ ಎಂದು ಮರುನಾಮಕರಣ ಮಾಡಲು ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!