ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಆಂಧ್ರಪ್ರದೇಶದಲ್ಲಿ ಕಾಂಡೋಮ್ಗಳ ಮೇಲೆ ಪಕ್ಷಗಳ ಹೆಸರು ಕಾಣಿಸಿಕೊಂಡಿದೆ.
ವೈಎಸ್ಆರ್ ಹಾಗೂ ತೆಲುಗು ದೇಶಂ ಪಾರ್ಟಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಕಾಂಡೋಮ್ಗಳನ್ನು ಹಂಚುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
ಕಾಂಡೋಮ್ಗಳನ್ನು ಏಕೆ ವಿತರಿಸುತ್ತೀರಿ ಎಂದು ಕೇಳಿದಾಗ ಟಿಡಿಪಿ ಕಾರ್ಯಕರ್ತ ಎಂದು ಹೇಳಿಕೊಂಡಾತ, ಹೆಚ್ಚು ಮಕ್ಕಳಿದ್ದರೆ ಹೆಚ್ಚು ಹಣ ವಿತರಿಸಬೇಕಾಗುತ್ತದೆ. ಹಾಗಾಗಿ ಕಾಂಡೋಮ್ಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಪಕ್ಷಗಳು ಈ ಮಟ್ಟಕ್ಕೆ ಇಳಿದಿರುವುದು ಚೀಪ್ ಪಾಲಿಟಿಕ್ಸ್ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
Indian politics is not for beginners!#AndhraPradesh pic.twitter.com/IFELhTarxO
— Biju VB (@Biju_Vaisyathil) February 22, 2024