April 4, 2026
Saturday, April 4, 2026
spot_img

‘ದೇವರ ಸ್ವಂತ ನಾಡು’ ಕೇರಳದಲ್ಲಿ ‘ನಮೋ’ ಭರ್ಜರಿ ಪ್ರಚಾರ: ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ದೇವರ ಸ್ವಂತ ನಾಡು’ ಕೇರಳದ ಚುನಾವಣಾ ಅಖಾಡಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೇರಳದ ತಿರುವಲ್ಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಮಧ್ಯಪ್ರಾಚ್ಯ ಯುದ್ಧದ ನಡುವೆ ಗಲ್ಫ್​ ರಾಷ್ಟ್ರಗಳು ಭಾರತದ ಕುರಿತು ಕೆಟ್ಟಭಾವನೆ ಮೂಡುವಂತೆ ಮಾಡುವುದು ಕಾಂಗ್ರೆಸ್ ನ ಉದ್ದೇಶ. ಅದಕ್ಕಾಗಿ ನಾನಾ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು.

ಯುದ್ಧದ ನಡುವೆ ನಮ್ಮ ಮೇಲಿನ ಅಭಿಪ್ರಾಯ ಬದಲಾಗುವಂತೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಗಲ್ಫ್​ ರಾಷ್ಟ್ರಗಳನ್ನು ಕೆರಳಿಸುವ ಹುನ್ನಾರ ನಡೆಸುತ್ತಿದೆ. ಆದರೆ ನಾನು ಕಾಂಗ್ರೆಸ್, ಎಲ್‌ಡಿಎಫ್, ಯುಡಿಎಫ್ ಜನರಿಗೆ ಹೇಳಲು ಬಯಸುತ್ತೇನೆ , ಚುನಾವಣೆ ಬಂದು ಹೋಗುತ್ತವೆ. ಆದರೆ ಗಲ್ಫ್​ ರಾಷ್ಟ್ರದಲ್ಲಿರುವ ಲಕ್ಷಾಂತರ ಕೇರಳಿಗರ ರಕ್ಷಣೆ ಮೊದಲ ಆದ್ಯತೆ ಎಂದು ತಿಳಿಸಿದರು.

ಭಾರತೀಯರು ಇಂದು ಗಲ್ಫ್​ ರಾಷ್ಟ್ರಗಳಲ್ಲಿ ಸುರಕ್ಷಿತರಾಗಿ ಇದ್ದಾರೆ. ಇದಕ್ಕೆ ಕಾರಣ ಅಲ್ಲಿನ ಜನರಲ್ಲಿ ನಮ್ಮವರು ಎಂಬ ಭಾವನೆ ಇದೆ. ಆದರೆ ನೀವು ಇಲ್ಲಿ ನೀಡುವ ಹೇಳಿಕೆಗಳಿಂದ ಆ ಭಾವನೆ ದೂರವಾಗಿ ಅಲ್ಲಿ ನೆಲೆಸಿರುವ ನಮ್ಮ ಜನರಿಗೆ ತೊಂದರೆಯಾಗಬಹುದು. ಹೀಗಾಗಿ ಅಸಂಬದ್ಧ ಮಾತುಗಳನ್ನು ನಿಲ್ಲಿಸಿ ಎಂದು ಗುಡುಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !