April 25, 2026
Saturday, April 25, 2026
spot_img

‘ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತಕ್ಕೆ ಸೇರುತ್ತೆ’: ಇಮಾಮ್ ಇಲ್ಯಾಸಿ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರ ಭೇಟಿಯ ವೇಳೆ ಅಖಿಲ ಭಾರತ ಇಮಾಮ್ ಸಂಸ್ಥೆಯ ಮುಖ್ಯಸ್ಥ ಉಮರ್ ಅಹಮ್ಮದ್ ಇಲ್ಯಾಸಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರ (PoK) ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದು ಶೀಘ್ರದಲ್ಲೇ ಮತ್ತೆ ಭಾರತದೊಂದಿಗೆ ಒಂದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಲ್ಯಾಸಿ, “ಪಾಕ್ ಆಕ್ರಮಿತ ಕಾಶ್ಮೀರದ ಜನರು ಭಾರತದೊಂದಿಗೆ ಸೇರಲು ಬಯಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಕಂಡುಬಂದ ಅಭಿವೃದ್ಧಿ ಮತ್ತು ಶಾಂತಿ ಅಲ್ಲಿನ ಜನರ ಗಮನ ಸೆಳೆದಿದೆ. ಘರ್ ವಾಪ್ಸಿ ದಿನ ದೂರವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಇಲ್ಯಾಸಿ ತಮ್ಮ ಹೇಳಿಕೆಯಲ್ಲಿ ಕಾಶ್ಮೀರದ ಬದಲಾವಣೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. “ಒಮ್ಮೆ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳ ಸುದ್ದಿಗಳಿಂದಲೇ ಕಣಿವೆ ರಾಜ್ಯ ಗುರುತಿಸಲ್ಪಡುತ್ತಿತ್ತು. ಈಗ ಮಕ್ಕಳ ಕೈಯಲ್ಲಿ ಕಲ್ಲುಗಳ ಬದಲು ಪೆನ್‌ಗಳಿವೆ. ಯುವಕರು ಶಿಕ್ಷಣ ಮತ್ತು ಸಾಧನೆ ಕಡೆ ಗಮನ ಹರಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಪಹಲ್ಗಾಮ್ ದಾಳಿಯ ಬಳಿಕವೂ ಕಾಶ್ಮೀರದಲ್ಲಿ ಭದ್ರತೆ ಮತ್ತು ಪ್ರವಾಸೋದ್ಯಮ ಕ್ರಮೇಣ ಚೇತರಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೂಡಿಕೆ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !