ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ಹೈದರಾಬಾದ್ನಲ್ಲಿ ಮೆಗಾ ರೋಡ್ಶೋ ನಡೆಸಿದರು.
ಈ ವೇಳೆ ಪ್ರಧಾನಿಯವರನ್ನು ನೋಡಲು ಬಿಜೆಪಿ ಬೆಂಬಲಿಗರು ಮತ್ತು ಪ್ರಧಾನಿಯವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜನಸಮೂಹದತ್ತ ಕೈಬೀಸುತ್ತಾ ಪ್ರಧಾನಿಯವರು ರೋಡ್ಶೋ ಮುಂದುವರಿಸಿದ್ದಾರೆ.
ಆರ್ಟಿಸಿ ಎಕ್ಸ್ ರಸ್ತೆಯಿಂದ ಆರಂಭವಾದ ರೋಡ್ಶೋನಲ್ಲಿ ನಾರಾಯಣಗುಡಾ, ವೈಎಂಸಿಎ ಕಾಚೇಗೌಡ ಜಂಕ್ಷನ್ಗಳ ಮೂಲಕ ಕಾಚೇಗೌಡ ವೀರ್ ಸಾವರ್ಕರ್ ಪ್ರತಿಮೆ ಬಳಿ ಮುಕ್ತಾಯಗೊಂಡಿದೆ.
ನವೆಂಬರ್ 28 ರಂದು ಚುನಾವಣಾ ಆಯೋಗದ ಪ್ರಚಾರ ಕೊನೆಗೊಳ್ಳುವ ಕಾರಣ ಬಿಜೆಪಿಯ ಅಂತಿಮ ಯತ್ನದ ಭಾಗವಾಗಿ ಈ ರೋಡ್ ಶೋ ಆಗಿದೆ. ಜನರು ಪ್ರಧಾನಿ ಪ್ರ ಘೋಷಣೆ ಕೂಗಿದರು.
ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.