ಗ್ರಾಹಕರಿಗೆ ಮತ್ತೆ ಶಾಕ್ ಕೊಟ್ಟ ನಂದಿನಿ: ಜಂಬೂ ಪ್ಯಾಕೇಟ್ ದರದಲ್ಲಿ 3 ರೂ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಈಗಾಗಲೇ ಗ್ರಾಹಕರಿಗೆ ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ( Nandini Productor ) ದರವನ್ನು ಕೆಎಂಎಫ್ ನಿಂದ ಹೆಚ್ಚಳ ಮಾಡಲಾಗಿತ್ತು. ಈಗ ನಂದಿನಿ ಜಂಬೂ ಹಾಲಿನ ದರವನ್ನು ( Nandini Milk Price Hike ) 3 ರೂ ಹೆಚ್ಚಳ ಮಾಡಿ ಆದೇಶಿಸಿದೆ.

ಈ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಹೇಳಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂಕೆಎಂಎಫ್, ಜಂಬೂ ಪ್ಯಾಕೇಟ್ ಹಾಲಿನದ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ನಾಳೆಯಿಂದ 231ರಿಂದ 234 ರೂಗೆ ಏರಿಕೆಯಾಗಲಿವೆ ಎಂದು ಹೇಳಿದೆ.

ಅಂದಹಾಗೇ ನಂದಿನಿ ಜಂಬೂ ಪ್ಯಾಕೇಟ್ ಹಾಲು 6 ಲೀಟರ್ ಸಾಮರ್ಥ್ಯದ್ದಾಗಿದೆ. ಈ ದರವನ್ನು ನಾಳೆಯಿಂದ ಜಾರಿಗೆ ಬರುವಂತೆ 3 ರೂ ಹೆಚ್ಚಿಸಿದ ಪರಿಣಾಮ 234 ರೂ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!