ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುಕೆ ಮೂಲದ ಬ್ರ್ಯಾಂಡ್ ಫಿನಾನ್ಸ್ ಕನ್ಸಲ್ಟೆನ್ಸಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಯಾವುದು ಎಂದು ಸಮೀಕ್ಷೆ ನಡೆಸಿದೆ. ಕರ್ನಾಟಕದ ಹೆಮ್ಮೆಯ ಹಾಲು ಹಾಲಿನ ಉತ್ಪನ್ನದ ಬ್ರ್ಯಾಂಡ್ ನಂದಿನ 4ನೇ ಸ್ಥಾನ ಪಡೆದುಕೊಂಡಿದೆ.
ಬ್ರ್ಯಾಂಡ್ ಫಿನಾನ್ಸ್ ನಡೆಸಿದ ಸರ್ವೆಯಲ್ಲಿ ಭಾರತದ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಮೂಲ್ ಡೈರಿ ಪಡೆದುಕೊಂಡಿದೆ. ಬರೋಬ್ಬರಿ 4.1 ಬಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ವ್ಯಾಲ್ಯೂನೊಂದಿಗೆ ಅಮೂಲ್ ಮೊದಲ ಸ್ಥಾನ ಪಡೆದುಕೊಂಡಿದೆ.
ಗುಜರಾತ್ ಮೂಲಕ ಹಾಲು ಹಾಗೂ ಹಾಲಿನ ಉತ್ಪನ್ನ ಬ್ರ್ಯಾಂಡ್ ಆಗಿರುವ ಅಮೂಲ್ ದೇಶದಲ್ಲೇ ಟಾಪ್ ಫುಡ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಇನ್ನು ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ದೆಹಲಿ ಮೂಲದ ಮದರ್ ಡೈರಿ 1.15 ಬಿಲಿಯನ್ ಅಮರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದೊಂದಿಗೆ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ವಾಡಿಯಾ ಗ್ರೂಪ್ ಒಡೆತನದಲ್ಲಿರುವ ಬ್ರಿಟಾನಿಯಾ 3ನೇ ಸ್ಥಾನದಲ್ಲಿದ್ದರೆ, ಕರ್ನಾಟಕದ ನಂದಿನಿ ನಾಲ್ಕು ಹಾಗೂ ಬರ್ಮನ್ ಕುಟುಂಬದ ಡಾಬುರ್ ಉತ್ಪನ್ನ ಭಾರತದ ಟಾಪ್ 5 ಫುಡ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.
ಭಾರತದ ಫುಡ್ ಬ್ರ್ಯಾಂಡ್ನಲ್ಲಿ ಅಮೂಲ್ ನಂಬರ್ 1 ಆಗಿದ್ದರೆ, ಭಾರತದ 100 ಟಾಪ್ ಬ್ರ್ಯಾಂಡ್ ಪಟ್ಟಿಯಲ್ಲಿ ಅಮೂಲ್ 17ನೇ ಸ್ಥಾನ ಪಡೆದುಕೊಂಡಿದೆ. 2024ರಲ್ಲಿ 41ನೇ ಭಾರತದ ಟಾಪ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದ್ದ ಮದರ್ ಡೈರಿ 2025ರಲ್ಲಿ 35ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
1 ) ಅಮೂಲ್
2 ) ಮದರ್ ಡೈರಿ
3 ) ಬ್ರಿಟಾನಿಯಾ
4 ) ನಂದಿನಿ
5 ) ಡಾಬುರ್