ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಡಿ ಟು ಕುಕ್ ದೋಸೆ ಹಾಗೂ ಇಡ್ಲಿ ಬ್ಯಾಟರ್‌ಗಳನ್ನು ಈಗಾಗಲೇ ಸಾಕಷ್ಟು ಕಂಪನಿಗಳು ತಯಾರು ಮಾಡುತ್ತಿವೆ, ಇವುಗಳಿಗೆ ಠಕ್ಕರ್ ಕೊಡೋದಕ್ಕೆ ನಂದಿನಿ ರೆಡಿಯಾಗಿದೆ.
ಬೆಂಗಳೂರಲ್ಲಿ ಇನ್ನು ಮುಂದೆ ನಂದಿನಿ ಹಾಲಷ್ಟೇ ಅಲ್ಲ, ನಂದಿನಿ ಬ್ರ್ಯಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟು ಕೂಡ ಸಿಗಲಿದೆ. ಬೆಂಗಳೂರಿನಲ್ಲಿ ರೆಡಿ ಬ್ಯಾಟರ್‌ಗೆ ಸಾಕಷ್ಟು ಡಿಮ್ಯಾಂಡ್ ಇದೆ, ಇದರ ಬಗ್ಗೆ ಗಮನ ಹರಿಸಿದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪನ್ನ ಮಾರಾಟಕ್ಕೆ ಮುಂದಾಗಿದೆ. ಸಿದ್ಧತೆ ನಡೆಸಿದೆ.
ನಾವು ಈಗಾಗಲೇ ಹಾಲು, ಬ್ರೆಡ್, ಬನ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ ಮತ್ತು ಮೊಸರು ಮುಂತಾದ ಉತ್ಪನ್ನಗಳನ್ನು ಹೊಂದಿದ್ದೇವೆ. ಈಗ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನವನ್ನು ಪ್ರಾರಂಭಿಸಲು ಬಯಸುತ್ತೇವೆ. ಹೆಚ್ಚಿನ ದುಡಿಯುವ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ವಿಶೇಷವಾಗಿ ತ್ವರಿತ ಉಪಹಾರ ಆಯ್ಕೆಗಳನ್ನು ಹುಡುಕುತ್ತಿರುವ ಟೆಕ್ಕಿಗಳನ್ನು ಗಮನದಲ್ಲಿರಿಸಿಕೊಂಡು ಈ ಉತ್ಪನ್ನಗಳು ಪರಿಚಯಿಸಲಾಗುತ್ತಿದೆ.ಎರಡು ತಿಂಗಳೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಕೆಎಂಎಫ್ ಹೇಳಿದೆ.