ಹೊಸ ದಿಗಂತ ವರದಿ, ಕುಶಾಲನಗರ:
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಕೂಡಿಗೆ ಸರ್ಕಲ್ ಸಮೀಪದ ಸೇತುವೆ ಬಳಿ ಮಾದಕ ವಸ್ತು ಮತ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಕುಶಾಲನಗರದ ಹೆಚ್. ಅಕ್ಬರ್, ಕೇರಳ ಮೂಲದವರಾದ ಮಹಮ್ಮದ್ ರಾಫಿ ಹಾಗೂ ಟಿ.ಕೆ.ರಿಷಿಕುಮಾರ್ ಬಂಧಿತರಾಗಿದ್ದು, ಅವರಿಂದ ಎರಡು ಬೈಕ್, 5 ಮೊಬೈಲ್, 13 ಗ್ರಾಂ. ಗಾಂಜಾ, ಹಾಗೂ 41 ಗ್ರಾಂ MDMA ನಿಷೇಧಿತ ಮಾದಕ ವಸ್ತು, 9,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಖಚಿತವಾದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ಕೂಡಿಗೆ ಸೇತುವೆ ದಾಳಿ ಮಾಡಿದಾಗ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ನಂತರ ಅವರ ವಿಚಾರಣೆ ಬಳಿಕ ಕುಶಾಲನಗರದ ಖಾಸಗಿ ವಸತಿ ಗೃಹದಲ್ಲಿದ್ದ ಇಬ್ಬರನ್ನು ಬಂಧಿಸಲಾಯಿತೆಂದು ಹೆಚ್ಚುವರಿ ಪೊಲೀಸ್ ಆಧೀಕ್ಷಕ. ಕೆ.ಎಸ್.ಸುಂದರ್ ರಾಜ್ ತಿಳಿಸಿದ್ದಾರೆ.
ಕುಶಾಲನಗರ ಡಿವೈ ಎಸ್ ಪಿ. ಆರ್ ವಿ, ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಸೂಚನೆಯಂತೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಡಿ.ಎಸ್.ಪುನೀತ್, ಎಂ.ದಿನೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು