January 30, 2026
Friday, January 30, 2026
spot_img

ಪಾರ್ಟ್‌ ಟೈಂ ಕೆಲಸ ಹುಡುಕೋಕೆ ಹೋಗಿ 12 ಲಕ್ಷ ಕಳೆದುಕೊಂಡ ನರ್ಸಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾರ್ಟ್​​ ಟೈಂ ಕೆಲಸಕ್ಕಾಗಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದ ನರ್ಸ್​​ ಒಬ್ಬರು ಆನ್‌ಲೈನ್‌ನಲ್ಲಿ ಮೋಸ ಹೋಗಿ ಬರೋಬ್ಬರಿ 12 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ತಾನು ಮೋಸ ಹೋಗಿದ್ದು ಅರಿವಾದ ಬಳಿಕ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದಾಳೆ.ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಭಾರತಿ ಎನ್ನುವ ಮಹಿಳೆ ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಇದ್ದ ಹಿನ್ನೆಲೆ ಪಾರ್ಟ್​​ ಟೈಂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.

ಈ ವೇಳೆ ಇನ್ಸ್ಟಾಗ್ರಾಮ್​​ ಲಿಂಕೊಂದು ಅವರ ಕಣ್ಣಿಗೆ ಬಿದ್ದಿದ್ದು, ಅದರ ಮೇಲೆ ಕ್ಲಿಕ್​​ ಮಾಡಿದ್ದರು. ಆ ಬಳಿಕ ಅವರಿಗೆ ಕಾಲ್​​ ಬಂದಿದ್ದು, ಟೆಲಿಗ್ರಾಮ್​​ ಗ್ರೂಪ್​​ ಒಂದಕ್ಕೆ ಭಾರತಿ ಅವರನ್ನು ಸೇರಿಸಿದ್ದರು. ಬಳಿಕ ಹಣದಾಸೆ ತೋರಿಸಿ ಇನ್ವೆಸ್ಟ್​​ ಮಾಡುವಂತೆ ಆರೋಪಿಗಳು ತಿಳಿಸಿದ್ದರು. ಅವರನ್ನು ನಂಬಿ ಹೇಳಿದಂತೆಲ್ಲ ಭಾರತಿ ಮಾಡಿದ್ದರು.

ಅಂತಿಮವಾಗಿ ನಿಮ್ಮ ಖಾತೆಯಲ್ಲಿ 15 ಲಕ್ಷ ಹಣವಿದೆ ಎಂದಿದ್ದ ಆರೋಪಿಗಳು, ಅದನ್ನು ವಿತ್​​ ಡ್ರಾ ಮಾಡಲು ಅಂತ ನಾನಾ ಕಾರಣ ಹೇಳಿ ಬರೋಬ್ಬರಿ 12 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಹಣ ಸಿಗುವ ನಂಬಿಕೆಯಿಂದ ನರ್ಸ್​​ ಭಾರತಿ ತನ್ನ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಸಹ ಬ್ಯಾಂಕ್​​ನಲ್ಲಿ ಅಡ ಇಟ್ಟು ಹಣ ಕಟ್ಟಿದ್ದಾರೆ. ಆದ್ರೂ ವಂಚಕರು ಹೇಳಿದ್ದ ಆ 15 ಲಕ್ಷ ರೂ. ಮಾತ್ರ ಕೈ ಸೇರಿಲ್ಲ. ಅಂತಿಮವಾಗಿ ತಾನು ಮೋಸ ಹೋದ ಬಗ್ಗೆ ಭಾರತಿಗೆ ಅರಿವಾಗಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !