ಬಾಹ್ಯಾಕಾಶದಿಂದ ಮಹಾ ಕುಂಭಮೇಳದ ವಿಹಂಗಮ ನೋಟ ಹಂಚಿಕೊಂಡ Nasa ಗಗನಯಾತ್ರಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: 
 
ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವನ್ನು ಬಾಹ್ಯಾಕಾಶದಿಂದಲೂ ಸೆರೆಹಿಡಿಯಲಾಗುತ್ತಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS) ರಾತ್ರಿ ಬಾಹ್ಯಾಕಾಶದಿಂದ ಮಹಾಕುಂಭ ಮೇಳದ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರಗಳಲ್ಲಿ, ಮಹಾ ಕುಂಭ ಮೇಳ ಮತ್ತು ಡೇರೆ ನಗರದ ಅದ್ಭುತ ನೋಟ ಕಂಡುಬಂದಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಚಿತ್ರಗಳು ಗಂಗಾ ನದಿಯ ದಡದಲ್ಲಿ ದೀಪಗಳಿಂದ ಪ್ರಜ್ವಲಿಸುತ್ತಿರುವ ವಿಶ್ವದ ಅತಿದೊಡ್ಡ ಮಾನವ ಸಭೆಯನ್ನು ತೋರಿಸುತ್ತವೆ. ಈ ಚಿತ್ರಗಳನ್ನು ISS ನ ಗಗನಯಾತ್ರಿ ಡಾನ್ ಪೆಟ್ಟಿಟ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡಿದ್ದಾರೆ.

Imageಚಿತ್ರಗಳಲ್ಲಿ, ಮಹಾ ಕುಂಭಮೇಳದ ಭವ್ಯ ದೀಪಾಲಂಕಾರ ಮತ್ತು ಭಕ್ತರ ಅಪಾರ ಜನಸಮೂಹವು ಗಂಗಾ ನದಿಯ ದಡವನ್ನು ಒಂದು ವಿಶಿಷ್ಟ ದೃಶ್ಯವಾಗಿ ಪರಿವರ್ತಿಸಿತು. ಬಾಹ್ಯಾಕಾಶದಿಂದ ತೆಗೆದ ಈ ಚಿತ್ರಗಳು ಭೂಮಿಯ ಮೇಲಿನ ಈ ಧಾರ್ಮಿಕ ಕಾರ್ಯಕ್ರಮದ ಭವ್ಯತೆಯನ್ನು ತೋರಿಸುತ್ತವೆ.

ಡಾನ್ ಪೆಟಿಟ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ ಚಿತ್ರಗಳಲ್ಲಿ 2025ರ ಮಹಾ ಕುಂಭಮೇಳದ ಅದ್ಭುತ ನೋಟ ಕಂಡುಬಂದಿದೆ ಎಂದು ಬರೆದಿದ್ದಾರೆ. ಜಗತ್ತಿನ ಅತಿದೊಡ್ಡ ಮಾನವ ಸಭೆ ಗಂಗಾ ನದಿಯ ದಡದಲ್ಲಿ ದೀಪಗಳಿಂದ ಹೊಳೆಯುತ್ತಿತ್ತು ಎಂದು ಬರೆದಿದ್ದಾರೆ.

https://x.com/astro_Pettit/status/1883613984563355783?ref_src=twsrc%5Etfw%7Ctwcamp%5Etweetembed%7Ctwterm%5E1883613984563355783%7Ctwgr%5Ea3ab3a7eaeff0202735d3614c71d9753c0cb4570%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2025%2FJan%2F27%2Fnasa-astronaut-shares-photos-of-maha-kumbh-from-space

ಅಮೇರಿಕನ್ ಗಗನಯಾತ್ರಿ ಮತ್ತು ಎಂಜಿನಿಯರ್ ಡೊನಾಲ್ಡ್ ರಾಯ್ ಪೆಟ್ಟಿಟ್ ಅವರು ತಮ್ಮ ಖಗೋಳ ಛಾಯಾಗ್ರಹಣ ಮತ್ತು ಕಕ್ಷೆಯಲ್ಲಿನ ನಾವೀನ್ಯತೆಗಾಗಿ ಹೆಸರುವಾಸಿಯಾಗಿದ್ದಾರೆ. ಪೆಟಿಟ್ ಬಾಹ್ಯಾಕಾಶದಲ್ಲಿ ರಚಿಸಲಾದ ಮೊದಲ ಪೇಟೆಂಟ್ ಪಡೆದ ವಸ್ತುವಾದ “ಝೀರೋ ಜಿ ಕಪ್” ನ ಸಂಶೋಧಕರೂ ಆಗಿದ್ದಾರೆ. 69 ವರ್ಷ ವಯಸ್ಸಿನ ಪೆಟ್ಟಿಟ್, ನಾಸಾದ ಅತ್ಯಂತ ಹಿರಿಯ ಸಕ್ರಿಯ ಗಗನಯಾತ್ರಿ. ಅವರು ಕಳೆದ 555 ದಿನಗಳಿಂದ ಐಎಸ್‌ಎಸ್‌ನಲ್ಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!