FOOD | ನಾಟಿ ಸ್ಟೈಲ್ ಬಿರಿಯಾನಿ, ಇಂದೇ ಟ್ರೈ ಮಾಡಿ ನೋಡಿ..

ಬೇಕಾಗುವ ಸಾಮಾಗ್ರಿಗಳು:

ರುಬ್ಬುವ ಮಿಶ್ರಣ:
ಈರುಳ್ಳಿ (ದೊಡ್ಡ ಗಾತ್ರ)-1/2
ಟೊಮ್ಯಾಟೊ (ಹುಳಿ)-1
ಕಾಳು ಮೆಣಸು-2 ಟೀ ಸ್ಪೂನ್
ಲವಂಗ-3
ಚಕ್ಕೆ- ಕಾಲು ಇಂಚು
ಶುಂಠಿ-1 ಇಂಚು
ಬೆಳ್ಳುಳ್ಳಿ- 2
ಕೊತ್ತಂಬರಿ ಸೊಪ್ಪು- 1/2 ಕಟ್ಟು
ಅರಿಶಿಣ
ಹಸಿ ಮೆಣಸಿನಕಾಯಿ- 10-12
ಕಾಯಿ- 2 ಟೇಬಲ್ ಸ್ಪೂನ್

ಕುಕ್ಕರ್ ನಲ್ಲಿ ಬಾಡಿಸಲು:
ಚಿಕನ್ – 2ಕೆ.ಜಿ.
ಈರುಳ್ಳಿ (ದೊಡ್ಡ ಗಾತ್ರ)-1/2
ಟೊಮ್ಯಾಟೊ (ಹುಳಿ)-1
ಪುದೀನಾ- 1 ಕಟ್ಟು
ಎಣ್ಣೆ -5 ಟೇಬಲ್ ಸ್ಪೂನ್
ತುಪ್ಪ-2ಟೇಬಲ್ ಸ್ಪೂನ್
ಉಪ್ಪು
ಅಕ್ಕಿ- 1 ಕಪ್

ವಿಧಾನ:

ಮೊದಲಿಗೆ ಕಾಯಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಕಾಳು ಮೆಣಸು, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು, ಲವಂಗ, ಚಕ್ಕೆ, ಶುಂಠಿ, ಬೆಳ್ಳುಳ್ಳಿ ಹಾಕಿ ಮಿಕ್ಸಿ ಜಾರ‍್ನಲ್ಲಿ ರುಬ್ಬಿಕೊಳ್ಳಿ. ಪ್ರೆಶರ್ ಕುಕ್ಕರ್ ಗೆ ಎಣ್ಣೆ ಮತ್ತು ತುಪ್ಪವನ್ನು ಹಾಕಿ ಕಾದ ನಂತರ, ಅರ್ಧ ಈರುಳ್ಳಿ, ಟೊಮ್ಯಾಟೊ, ಪುದೀನಾ, ಅರಿಶಿಣ ಮತ್ತು ಉಪ್ಪನ್ನು ಹಾಕಿ ಬೇಯಿಸಿ. ಈಗ ಚಿಕನ್ ಅನ್ನು ಚೆನ್ನಾಗಿ ತೊಳೆದ ನಂತರ ಕುಕ್ಕರ್ ಗೆ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಇದಕ್ಕೆ ಸೇರಿಸಿ ಎಣ್ಣೆ ಬಿಡುವ ವರೆಗೂ ಬಾಡಿಸಿಕೊಳ್ಳಿ. ತೊಳೆದು ನೆನೆಸಿದ ಅಕ್ಕಿಯನ್ನು ಸೇರಿಸಿ 2 ಕಪ್ ನೀರು ಹಾಕಿ 2 ವಿಶಲ್ ನಂತರ ಚಿಕನ್ ಬಿರಿಯಾನಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!