ಹೊಸದಿಗಂತ ವರದಿ ಮಡಿಕೇರಿ:
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ನಲ್ಲಿ ಜಿಲ್ಲೆಯ ಕುಂಞಂಗಡ ದ್ವೀಪ್ ಮೇದಪ್ಪ ಚಿನ್ನದ ಪದಕ ಪಡೆದಿದ್ದಾರೆ.
ಕ್ರೀಡಾಕೂಟದ 1500 ಮೀಟರ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ಸ್ವರ್ಣ ಪದಕ ಪಡೆದಿರುವ ದ್ವೀಪ್ ಮೇದಪ್ಪ 4*400 ಮೀಟರ್ ಓಟದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ದ್ವೀಪ್ ಮೇದಪ್ಪ ಅವರು ಹುದಿಕೇರಿ ಸಮೀಪ ಕೋಣಗೇರಿ ಗ್ರಾಮದ ಕುಂಞಂಗಡ ಸುಜಿತ್ ತಮ್ಮಯ್ಯ ಮತ್ತು ಕಾವ್ಯ ಮುತ್ತಮ್ಮ (ತಾಮನೆ-ಕಳ್ಳಿಚಂಡ) ಪುತ್ರನಾಗಿದ್ದು, ಗೋಣಿಕೊಪ್ಪ ಕಾಲ್ಸ್ ವಿದ್ಯಾ ಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.