ಲೋಕಸಭೆಯಲ್ಲಿ ರಾಷ್ಟ್ರೀಯ ದಂತ ಆಯೋಗ, ನರ್ಸಿಂಗ್‌ -ಪ್ರಸೂತಿ ಆಯೋಗ ಮಸೂದೆ ಮಂಡನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೋಕಸಭೆಯಲ್ಲಿ ಇಂದು1948ರ ದಂತವೈದ್ಯ ಕಾಯ್ದೆ ರದ್ದು ಮಾಡಿ ರಾಷ್ಟ್ರೀಯ ದಂತ ಆಯೋಗ (ಎನ್‌ಡಿಸಿ) ರಚನೆಗೆ ಅವಕಾಶ ನೀಡುವ ರಾಷ್ಟ್ರೀಯ ದಂತ ಆಯೋಗ ಮಸೂದೆ-2023 ಅನ್ನು ಕೇಂದ್ರ ಸರ್ಕಾರ ಸೋಮವಾರ ಮಂಡನೆ ಮಾಡಿತು.

ಅದೇ ರೀತಿ 1947ರ ಭಾರತೀಯ ನರ್ಸಿಂಗ್‌ ಮಂಡಳಿ ಕಾಯ್ದೆ ರದ್ದು ಮಾಡಿ, ರಾಷ್ಟ್ರೀಯ ನರ್ಸಿಂಗ್‌ ಮತ್ತು ಪ್ರಸೂತಿ ಆಯೋಗ (ಎನ್‌ಎನ್‌ಎಂಸಿ) ರಚನೆ ಮಾಡುವ ಗುರಿ ಹೊಂದಿರುವ ರಾಷ್ಟ್ರೀಯ ನರ್ಸಿಂಗ್‌ ಮತ್ತು ಪ್ರಸೂತಿ ಆಯೋಗ ಮಸೂದೆ-2023 ಮಂಡಿಸಿತು.

ಎನ್‌ಡಿಸಿ ಮಸೂದೆಯು ದೇಶದ ದಂತ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಯನ್ನು ನಿಯಂತ್ರಿಸಲು ಎನ್‌ಎಂಸಿ ರಚನೆಗೆ ಶಿಫಾರಸು ಮಾಡುತ್ತದೆ. ಕೈಗೆಟಕುವ ದರದಲ್ಲಿ ದಂತವೈದ್ಯ ಶಿಕ್ಷಣ ನೀಡುವ ಮತ್ತು ಗುಣಮಟ್ಟದ ದಂತ ಚಿಕಿತ್ಸೆ ಒದಗಿಸುವ ಗುರಿಯನ್ನು ಹೊಂದಿದೆ.

ಎನ್‌ಎನ್‌ಎಂಸಿ ಮಸೂದೆಯ ಉದ್ದೇಶ ಗುಣಮಟ್ಟದ ಶಿಕ್ಷಣ ಹಾಗೂ ನರ್ಸಿಂಗ್ ಮತ್ತು ಪ್ರಸೂತಿಶಾಸ್ತ್ರ ಕಲಿತ ವೃತ್ತಿಪರರ ಸೇವೆಗಳು, ಸಂಸ್ಥೆಗಳ ಮೌಲ್ಯಮಾಪನ, ರಾಷ್ಟ್ರೀಯ ಮತ್ತು ರಾಜ್ಯ ರಿಜಿಸ್ಟರ್‌ಗಳ ನಿಯಂತ್ರಣ ಮತ್ತು ನಿರ್ವಹಣೆ ಗುರಿ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here