ಹೊಸದಿಗಂತ ಡಿಜಿಟಲ್ ಡೆಸ್ಕ್:
ತಪಸ್ – ಸಾಧನಾದ 2024-25ನೇ ಸಾಲಿಗಾಗಿನ ಮೊದಲ ಹಂತದ ಪ್ರವೇಶ ಪರೀಕ್ಷೆಯನ್ನು ರಾಜ್ಯದ 46 ಕೇಂದ್ರಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ತಪಸ್‌ಗಾಗಿ 5000ಕ್ಕೂ ಹೆಚ್ಚು ಹುಡುಗರು ಹಾಗೂ ಸಾಧನಾಗಾಗಿ 8600ಕ್ಕೂ ಹೆಚ್ಚು ಹುಡುಗಿಯರು ಪ್ರವೇಶ ಪರೀಕ್ಷೆಯನ್ನು ಬರೆದರು. 2ನೇ ಹಂತದ ಪ್ರವೇಶ ಪರೀಕ್ಷೆ 2024ರ ಜನವರಿ 26ಕ್ಕೆ ಇರಲಿದೆ.
ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ಹುಡುಗರಿಗೆ ತಪಸ್‌ನಲ್ಲಿ ಐಐಟಿ-ಜೆಇಇ ತರಬೇತಿ ಹಾಗೂ ಹುಡುಗಿಯರಿಗೆ ಸಾಧನಾದಲ್ಲಿ ನೀಟ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.
ತಪಸ್‌ನಲ್ಲಿ ಕಳೆದ 10 ವರ್ಷದಲ್ಲಿ 366 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗಿದ್ದು, 36 ಮಂದಿ ಐಐಟಿ ಪ್ರವೇಶ ಪಡೆದಿದ್ದರೆ 92 ಮಂದಿ ಎನ್‌ಐಟಿ ಪ್ರವೇಶ ಪಡೆದಿದ್ದಾರೆ. ಹಾಗೆಯೇ, ಸಾಧನಾದಲ್ಲಿ ಕಳೆದ 5 ವರ್ಷಗಳಲ್ಲಿ 246 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗಿದ್ದು, 58 ಮಂದಿ ಎಂ.ಬಿ.ಬಿ.ಎಸ್. ಮೆರಿಟ್ ಸೀಟು ಪಡೆದಿದ್ದಾರೆ.