ಧರ್ಮ, ಜಾತಿ, ಪಂಥಗಳ ಭಿನ್ನಾಭಿಪ್ರಾಯಕ್ಕಿಂತ ರಾಷ್ಟ್ರೀಯ ಏಕತೆ ಮುಖ್ಯ: ಸದ್ಗುರು ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಕಣಿವೆಯಲ್ಲಿ ಮಂಗಳವಾರ ಉಗ್ರರ ಗುಂಡಿನ ದಾಳಿಯಿಂದ 26 ಪ್ರವಾಸಿಗರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಪುಲ್ವಾಮಾ ದಾಳಿಯ ನಂತರ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

ಈ ಭಯೋತ್ಪಾದಕ ದಾಳಿಗೆ ಇಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಹೀನಾ ಕೃತ್ಯವನ್ನು ಅವರು ಹೇಡಿತನ ಎಂದು ಕರೆದಿದ್ದಾರೆ.

ಭಯೋತ್ಪಾದಕರು ದೇಶದ ಆರ್ಥಿಕ ಪ್ರಗತಿಯನ್ನು ಹಳಿತಪ್ಪಿಸಲು ಅವ್ಯವಸ್ಥೆಯನ್ನು ಸೃಷ್ಟಿಸಲು ಬಯಸುತ್ತಾರೆ. ನಾವು ಈ ದೇಶದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಬಯಸಿದರೆ, ಅಂತಹ ಅರಾಜಕತಾವಾದಿ ಅಂಶಗಳನ್ನು ದೃಢನಿಶ್ಚಯದಿಂದ ಎದುರಿಸಬೇಕು. ಧರ್ಮ, ಜಾತಿ, ಪಂಥಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲುವುದು ಬಹಳ ಮುಖ್ಯ” ಎಂದು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!