ರಷ್ಯಾದೊಂದಿಗೆ ವ್ಯವಹಾರ ನಡೆಸಿದರೆ ಕಠಿಣ ನಿರ್ಬಂಧ: ಭಾರತ, ಚೀನಾ, ಬ್ರೆಜಿಲ್ ಗೆ ಬೆದರಿಕೆ ಹಾಕಿದ ನ್ಯಾಟೋ!

ಹೊಸ ದಿಗಂತ ಡಿಜಿಟಿಲ್ ಡೆಸ್ಕ್:

ರಷ್ಯಾದೊಂದಿಗೆ ಬ್ರೆಜಿಲ್ , ಚೀನಾ ಮತ್ತು ಭಾರತದಂತಹ ರಾಷ್ಟ್ರಗಳು ವ್ಯವಹಾರ ಮುಂದುವರೆಸಿದರೆ ಅತ್ಯಂತ ಕಠಿಣವಾದ ನಿರ್ಬಂಧ ಹಾಕಲಾಗುವುದು ಎಂದು ನ್ಯಾಟೋ ಕಾರ್ಯದರ್ಶಿ ಜನರಲ್ ಮಾರ್ಕ್ ರುಟ್ಟೆ ಬುಧವಾರ ಎಚ್ಚರಿಕೆ ನೀಡಿದ್ದಾರೆ

50 ದಿನಗಳಲ್ಲಿ ಶಾಂತಿ ಒಪ್ಪಂದದ ಹೊರತು ರಷ್ಯಾದಿಂದ ರಫ್ತು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100ರಷ್ಟು ದ್ವಿತೀಯ ಸುಂಕದ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು.

ಟ್ರಂಪ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ಚೀನಾ, ಭಾರತ ಮತ್ತು ಬ್ರೆಜಿಲ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇದರಿಂದ ನಿಮಗೆ ತೀವ್ರ ತೊಂದರೆಯಾಗಬಹುದು ಎಂದರು.

ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಮಾಡಿ, ಉಕ್ರೇನ್ ವಿರುದ್ಧದ ಶಾಂತಿ ಮಾತುಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ ಎಂದು ಹೇಳಿದರು.

ಟ್ರಂಪ್‌ರೊಂದಿಗಿನ ಒಪ್ಪಂದದಡಿ, ಉಕ್ರೇನ್‌ಗೆ ಈಗ ವಾಯು ರಕ್ಷಣೆ ಮಾತ್ರವಲ್ಲ, ಕ್ಷಿಪಣಿಗಳು ಮತ್ತು ಯುರೋಪಿಯನ್ನರು ನೀಡಲಾದ ಮದ್ದುಗುಂಡುಗಳನ್ನು ಅಮೆರಿಕ ಪೂರೈಸುತ್ತದೆ ಎಂದು ರುಟ್ಟೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!