ಪ್ರಕೃತಿ ವಿಕೋಪ ನಿರ್ವಹಣೆ ಸಮ್ಮೇಳನ: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಫಸ್ಟ್

ಹೊಸದಿಗಂತ ವರದಿ ಸೋಮವಾರಪೇಟೆ:

ಇಲ್ಲಿನ ಬಿಟಿಸಿ ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು ಪ್ರಕೃತಿ ವಿಕೋಪ ನಿರ್ವಹಣೆ ಸಮ್ಮೇಳನದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಕೆಲವರು ಬಹುಮಾನ ಪಡೆದುಕೊಂಡರು.

ಕಾಲೇಜು ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಜೀವ ರಕ್ಷಣೆಯಲ್ಲಿ ತಾವು ಏನು ಮಾಡಬಹುದೆಂದು ಛಾಯಾಚಿತ್ರ ಹಾಗೂ ಭಿತ್ತಿಪತ್ರದ ಮೂಲಕ ಅನಾವರಣಗೊಳಿಸಿದರು.
ಪ್ರಬಂಧ ಮಂಡನೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಶಾನ್ಯ ಹಾಗೂ ರಜತ್ ಕುಮಾರ್ ಪ್ರಥಮ,ಇದೇ ಕಾಲೇಜಿನ ಅಕ್ಷತಾ ಹಾಗೂ ಅನಗ ದ್ವಿತೀಯ, ವೀರಾಜಪೇಟೆ ಸೆಂಟ್ಆನ್ಸ್ ಕಾಲೇಜಿನ ಕಾವೇರಮ್ಮ ಮತ್ತು ಶರ್ಲಿತ್ ತೃತೀಯ ಸ್ಥಾನ ಪಡೆದರು.

ಭಿತ್ತಿ ಪತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಅಂಕಿತಾ ಹಾಗೂ ರಕ್ಷಾ ಪ್ರಥಮ,ಇದೇ ಕಾಲೇಜಿನ ಪ್ರೇಕ್ಷಾ ಹಾಗೂ ಬಾಬು ದ್ವಿತೀಯ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಪಿತಾ ತೃತೀಯ ಬಹುಮಾನ ಗಳಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲೆ ಧನಲಕ್ಷ್ಮಿ, ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಕುಸುಮಾ ಹಾಗೂ ಪ್ರೊಫೆಸರ್’ಗಳಾದ ಪಾವನಿ ಮತ್ತು ಸುನೀತಾ ಬಹುಮಾನ ವಿತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!