ದಸರೀಘಟ್ಟದಲ್ಲಿ ನವರಾತ್ರಿ ಸಂಭ್ರಮ: ಚೌಡೇಶ್ವರಿ ದೇವಿಗೆ ಮಹಾಭಿಷೇಕ.. ರುದ್ರಾಕ್ಷಿ, ಕುಂಕುಮ ಅಲಂಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರು ಜಿಲ್ಲೆಯ ದಸರೀಘಟ್ಟದ ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ.

ಉತ್ಸವದ ಹಿನ್ನೆಲೆಯಲ್ಲಿ ಸಿಂಗಾರಗೊಂಡು ಕಂಗೊಳಿಸುತ್ತಿರುವ ಕ್ಷೇತ್ರ ಭಕ್ತಾದಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಶ್ರೀ ಕ್ಷೇತ್ರ ದಸರೀಘಟ್ಟದ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಮಹಾಭಿಷೇಕ ಹಾಗೂ 1 ಲಕ್ಷ ರುದ್ರಾಕ್ಷಿ ಅಲಂಕಾರ ಹಾಗೂ ಕುಂಕುಮ ಅಲಂಕಾರ ನೆರವೇರಿಸಲಾಯಿತು.

ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಈ ವಿಶೇಷ ಅಲಂಕಾರ ನೆರವೇರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!