July 30, 2026
Thursday, July 30, 2026
spot_img

SHOCKING | ಗರ್ಲ್‌ಫ್ರೆಂಡ್‌ನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆಯ ಉದ್ಯೋಗಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೇಯಸಿಯನ್ನು ಕೊಂದು ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದ ನೌಕಾಪಡೆಯ ಉದ್ಯೋಗಿಯನ್ನು ಬಂಧಿಸಲಾಗಿದೆ.

ವಿಶಾಖಪಟ್ಟಣದ ಗಜುವಾಕ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದೆ. ಆರೋಪಿ ರವೀಂದ್ರ ಎಲ್‌ ವಿ ನಗರದಲ್ಲಿರುವ ತನ್ನ ಮನೆಯಲ್ಲಿ ಗರ್ಲ್‌ಫ್ರೆಂಡ್‌ನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ನಂತರ ಫ್ರಿಡ್ಜ್‌ನಲ್ಲಿ ಇರಿಸಿದ್ದಾನೆ.

ರವೀಂದ್ರಗೆ ಮದುವೆಯಾಗಿದ್ದು, ಹೆಂಡತಿ ಊರಿಗೆ ಹೋಗಿದ್ದಾಗ ಪ್ರೇಯಸಿ ಮೌನಿಕಾಳನ್ನು ಮನೆಗೆ ಕರೆಸಿಕೊಂಡಿದ್ದಾನೆ. ನಂತರ ಇಬ್ಬರ ನಡುವೆ ಜಗಳವಾಗಿದೆ. ಮಾತು ಅತಿಯಾದ ನಂತರ ಆತ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅರ್ಧ ಭಾಗವನ್ನು ಗೋಣಿಯಲ್ಲಿ ಇನ್ನರ್ಧ ಭಾಗವನ್ನು ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದಾನೆ.ಆರೋಪಿ ರವೀಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಾಜುವಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !